ಕಬ್ಬಿನ ಹಾಲು
ರಸ್ತೆ ಬದಿಯಲ್ಲಿ ಸಿಗುವ ಕಬ್ಬಿನ ಹಾಲು ಕುಡಿಯುತ್ತಿರುತ್ತಿರಾ, ಹಾಗಾದರೆ ಮೊದಲು ಇದನ್ನ ಓದಿ..!ರಸ್ತೆ ಬದಿಯಲ್ಲಿ ಕಬ್ಬಿನ ಹಾಲಿನ ಅಂಗಡಿ ಕಂಡರೆ ಸಾಕು ದಾಹಕ್ಕೆ ನಿಲ್ಲಿಸಿ ಒಂದು ಗ್ಲಾಸ್ ಕುಡಿದೆ ಮುಂದೆ ಹೋಗುತ್ತೇವೆ ನೀವು ನಿಲ್ಲಿಸಿ ಕುಡಿಯುವ ಆ ಒಂದು ಒಂದು ಗ್ಲಾಸ್ ಕಬ್ಬಿನ ಹಾಲು ನಿಮ್ಮ ದೇಹಕ್ಕೆ ಎಷ್ಟೆಲ್ಲಾ ಆರೋಗ್ಯಕರ ಲಾಭಗಳನ್ನು ಕೊಡುತ್ತವೆ ಗೊತ್ತಾ, ಗೊತ್ತಾದರೆ ಪ್ರತಿ ದಿನ ಒಂದು ಗ್ಲಾಸ್ ಕಬ್ಬಿನ ಹಾಲು ಕುಡಿಯುತ್ತಿರಾ ನೀವೇ ನೋಡಿ.
ಪೋಷಕಾಂಶಗಳು ಕಬ್ಬಿನ ಹಾಲಿನಲ್ಲಿ ಕಬ್ಬಿಣದಂಶ, ಪೊಟಾಷ್ಯಿಯಂ, ಮ್ಯಾಗ್ನಿಷಿಯಂ ಅಂಶವಿದ್ದು ಇದು ವಿಟಮಿನ್ ಗಳ ಕೊರತೆಯನ್ನು ನೀಗಿಸುತ್ತದೆ, ಶೀತ, ಗಂಟಲು ನೋವಿಗೆ ಉತ್ತಮ ಔಷಧಿ ಶೀತ, ಗಂಟಲು ಕೆರತ, ಗಂಟಲು ನೋವು ಈ ರೀತಿ ಸಮಸ್ಯೆ ಕಂಡು ಬಂದರೆ ಕಬ್ಬಿನ ಜ್ಯೂಸ್ ಕುಡಿದರೆ ಗುಣಮುಖವಾಗುವುದು.
ದೇಹಕ್ಕೆ ಅತಿ ಉಷ್ಣವಾದಾಗ ತಾಜಾತನದ ಈ ಹಾಲಿನ ಸೇವನೆಯಿಂದ ದೇಹವು ಕೂಡಲೇ ಸಮಸ್ಥಿತಿಗೆ ಬಂದು ಉರಿಶಮನವಾಗಿ ಚೈತನ್ಯ ವೃದ್ಧಿಸುವುದು, ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ ಕಬ್ಬಿನ ಹಾಲನ್ನು ಕುಡಿಯುವುದಕ್ಕಿಂತ ಕಬ್ಬಿನ ಜಲ್ಲೆಯನ್ನು ಜಗಿದು ರಸ ಹೀರಿದರೆ ಹಲ್ಲು ಮತ್ತು ಒಸಡುಗಳು ಗಟ್ಟಿಗೊಳ್ಳುತ್ತವೆ ಇದರಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸಲು ನೆರವಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಒಂದು ಗ್ಲಾಸ್ ಕಬ್ಬಿನ ಹಾಲು ಅಥವಾ ಕಬ್ಬು ತಿನ್ನುವುದರಿಂದ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಕಬ್ಬಿನ ಜ್ಯೂಸ್ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಇದು ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಈ ರೀತಿಯ ಕ್ಯಾನ್ಸರ್ ಬರದಂತೆ ಕಬ್ಬಿನ ಹಾಲು ಸಹಾಯ ಮಾಡುತ್ತದೆ.
Comments