ಹುರುಳಿಕಾಯಿ (ಹಸಿರು ಬೀನ್ಸ್)
ಈ ಹುರುಳಿಕಾಯಿಯನ್ನು ಪ್ರತಿಯೊಬ್ಬರೂ ತಿನ್ನುತ್ತಾರೆ ಆದ್ರೆ ಇದು ನಿಜವಾಗಲೂ ಒಳ್ಳೆದ ಇದರಿಂದ ಏನ್ ಆಗುತ್ತೆ ಗೊತ್ತಾ..!ಜೀವಸತ್ವಕ್ಕೆ ಉಪಕಾರಿ :ಇದರಲ್ಲಿ ವಿಟಮಿನ್ ಕೆ ಇದ್ದು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಗಾಯಗಳನ್ನು ಗುಣಪಡಿಸುತ್ತದೆ. ಇದು ವಯಸ್ಸಾದವರ ಮೂಳೆಗಳನ್ನು ಬಲಪಡಿಸುತ್ತದೆ.
ಫೈಬರ್ ಸಮೃದ್ಧವಾಗಿದೆ :ಹಸಿರು ಬೀನ್ಸ್ ಗಳು ಫೈಬರ್ ಗಳ ಸಮೃದ್ಧ ಮೂಲವಾಗಿದೆ, ಫೈಬರ್ ಅನೇಕ ರೋಗಗಳಿಗೆ ಉಪಯೋಗಕಾರಿ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇದ್ದವರಿಗೆ ಫೈಬರ್ ಇರುವ ಆಹಾರವನ್ನು ಶಿವಾರಸ್ಸು ಮಾಡಲಾಗುತ್ತದೆ, ಫೈಬರ್ ಅಂಶವು ಮಲಬದ್ಧತೆ, ಮೊರೊಯಿಡ್ಸ್ ಮತ್ತು ಡೈವರ್ಟಿಕ್ಯುಲೋಸಿಸ್ನ ತಡೆಗಟ್ಟುವಿಕೆಯಲ್ಲಿ ಹೆಚ್ಚು ಉಪಕಾರಿ, ಮತ್ತು ಬೀನ್ಸ್ ನಲ್ಲಿ ಹೆಚ್ಚಿನ ನಾರಿನ ಅಂಶ ಇರುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಪ್ರಮಾಣವನ್ನು ಕಡಿಮೆಮಾಡುತ್ತದೆ.
ಗರ್ಬಿಣಿಯರಿಗೆ ಸಹಕಾರಿ :ಹಸಿರು ಬೀನ್ಸ್ ತಿನ್ನುವುದರಿಂದ ಗರ್ಬಿಣಿಯರಿಗೆ ಬೇಕಾದ ಪೌಷ್ಟಿಕಾಂಶಗಳ ಪೂರೈಕೆ ಮಾಡುತ್ತದೆ, ಇದರಲ್ಲಿ ನಿಯಾಸಿನ್ ಮತ್ತು ಥೈಯಾಮೈನ್ ನಂತಹ ಹಲವಾರು ವಿಟಮಿನ್ಗಳು ಪೋಷಕಾಂಶಗಳ ಉತ್ತಮ ಮೂಲವಾಗಿದೆ.
ಜೀವಕೋಶ ಮತ್ತು ದೇಹದ ದ್ರವವನ್ನು ನಿಭಾಯಿಸುತ್ತದೆ :ಹಸಿರು ಬೀನ್ಸ್ ನಲ್ಲಿ ಪೊಟ್ಯಾಸಿಯಮ್ ಅಂಶವು ಇದ್ದು ದೇಹವನ್ನು ಉತ್ತಮ ಜೀವಕೋಶದ ಉತ್ಪಾದನೆ ಮತ್ತು ದೇಹ ದ್ರವ ಚಲನೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ರಕ್ತದೊತ್ತಡ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
Comments