ಬೆಳ್ಳುಳ್ಳಿ
ಶೀತ ನೆಗಡಿಗೆ ತುಂಬ ಸರಳ ಮನೆಮದ್ದುಗಳು..!
ಕಾಳು ಮೆಣಸು ತಿನ್ನಲು ಕಷ್ಟವಾದರೆ, ನಿಂಬೆ ರಸ ಮತ್ತು ಜೇನು ತುಪ್ಪವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ, ಪ್ರತಿ ಎರಡು ಗಂಟೆಗಳಿಗೊಮ್ಮೆ ಸೇವಿಸಿದರೆ ನೆಗಡಿ ,ಗಂಟಲು ಕೆರೆತ ನಿವಾರಣೆಯಾಗತ್ತದೆ
ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣವಿರುವುದರಿಂದ ಕೆಲವೊಂದು ರೋಗಗಳಿಗೆ ಮದ್ದಾಗಿ ಬಳಸಬಹುದು. ಬೆಳ್ಳುಳ್ಳಿಯಲ್ಲಿ ಜೀವನಿರೋಧಕಶಕ್ತಿ ಇದ್ದು, ದೇಹದಲ್ಲಿರುವ ಅನಾರೋಗ್ಯಕರ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.
ಒಂದು ಎಸಳು ಬೆಳ್ಳುಳ್ಳಿ, ಎರಡು ಲವಂಗ, ಎರಡು ಚಮಚ ನಿಂಬೆ ರಸ, ಒಂದು ಚಮಚ ಜೇನುತುಪ್ಪ, ಅರ್ಧ ಟೀ ಚಮಚ ಕಾಳು ಮೆಣಸಿನ ಪುಡಿಯನ್ನು ಒಟ್ಟಿಗೆ ಬೆರೆಸಿ ಜಗಿದು ತಿಂದರೆ ಶೀತ ಕಡಿಮೆಯಾಗುತ್ತದೆ.ಜೇನು ತುಪ್ಪವು ದೇಹದಲ್ಲಿರುವ ಬ್ಯಾಕ್ಟಿರೀಯಾ ಮತ್ತು ಕೀಟಾಣುಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.
ಮೇಲಿನ ಎಲ್ಲ ಸಾಮಗ್ರಿಯನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಕುದಿಸಿ ಕುಡಿದರೆ ತಕ್ಷಣ ಕಡಿಮೆಯಾಗುವುದಲ್ಲದೇ ದೇಹದಲ್ಲಿ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.ಸಾಧ್ಯವಾದಷ್ಟು ಮನೆಯಲ್ಲಿಯೇ ಕೆಲವು ಮದ್ದು ತಯಾರಿಸಿ ಕುಡಿದರೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ.
ಗಾಯಗಳಿಗೆ ಹಾಗು ಕೊಳೆತು ನಾರುವ ಹುಣ್ಣಿಗೆ ಬೆಳ್ಳುಳ್ಳಿ ಬಳಸಿ ಹೀಗೆ ಮಾಡಿ ಸುಲಭ ಉಪಶಮನ ಪಡೆಯಬಹುದು..!
ಬೆಳ್ಳುಳ್ಳಿ ಯನ್ನು ನೀರಿನಲ್ಲಿ ಬೇಯಿಸಿ, ಆ ದ್ರಾವಣದಿಂದ ಗಾಯಗಳನ್ನು ತೊಳೆಯುವುದರಿಂದ ರೋಗಾಣು ಜೀವಗಳು ನಾಶವಾಗುತ್ತದೆ. ಬೆಳ್ಳುಳ್ಳಿ ಹೊಂಗೆ ಬೀಜ ಮತ್ತು ಅಡಿಗೆ ಉಪ್ಪು ನುಣ್ಣಗೆ ಅರೆದು ಗಾಯಗಳಿಗೆ ಹಚ್ಚಿದರೆ ಗುಣ ಕಂಡು ಬರುವುದು.
ಬೆಳ್ಳುಳ್ಳಿಯನ್ನು ಆಹಾರದಲ್ಲಿ ಪ್ರತಿದಿನ ಬಳಸುತ್ತಿದ್ದರೆ ನೆಗಡಿ ಬರುವುದಿಲ್ಲ ಕೀಲು ನೋವು ಸಂಧಿವಾತದ ದೆಸೆಯಿಂದಾಗುವ ನೋವು ಕಾಣಿಸಿಕೊಳ್ಳುವುದಿಲ್ಲ.
ಕೊಳೆತು ನಾರುವ ಹುಣ್ಣಿಗೆ ಬೆಳ್ಳುಳ್ಳಿಯನ್ನು ಬೆಣ್ಣೆಯೊಂದಿಗೆ ಅರೆದು ಹಚ್ಚಿದರೆ ಶೀಘ್ರ ಗುಣ ಕಂಡು ಬರುವುದು. ಬೆಳ್ಳುಳ್ಳಿಯ ಒಂದು ತೊಳೆಯನ್ನು ಚೆನ್ನಾಗಿ ಮಸೆದು ಚೇಳು ಕುಟುಕಿದ ಜಾಗಕ್ಕೆ ಹಚ್ಚಿದರೆ ಶೀಘ್ರ ಗುಣ ಕಂಡು ಬರುವುದು.
ಬೆಳ್ಳುಳ್ಳಿಯ ಸತತ ಬಳಕೆಯಿಂದ ದೀರ್ಘಕಾಲದಿಂದ ಗುಣ ವಾಗದಿದ್ದ ಕೆಮ್ಮು ನೆಗಡಿ ಗುಣವಾಗುವುದು. ಅಜೀರ್ಣ ಹೊಟ್ಟೆ ಉಬ್ಬರ ಉಂಟಾದಾಗ ಒಂದು ಬೆಳ್ಳುಳ್ಳಿಯನ್ನು ಬಿಸಿ ಭೂದಿಯಲ್ಲಿ ಇತ್ತು ಸುತ್ತು ತಿನ್ನುವುದರಿಂದ ಶೀಘ್ರ ಗುಣ ಕಂಡುಬರುವುದು.
ಒಂದು ಟೀ ಚಮಚ ಬೆಳ್ಳುಳ್ಳಿ ರಸವನ್ನು ಅಷ್ಟೇ ಪ್ರಮಾಣ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತು ಹುಳಗಳು ಮಲದ ಮೂಲಕ ಹೊರಬೀಳುತ್ತವೆ. ಉಬ್ಬಸ ರೋಗಿಗಳ ಹಾಲಿನಲ್ಲಿ ಬೇಯಿಸಿದ ಮೂರು ನಾಲ್ಕು ಬೆಳ್ಳುಳ್ಳಿ ಯನ್ನು ಪ್ರತಿದಿನ ಸೇವಿಸುವುದರಿಂದ ರೋಗ ಉಲ್ಬಣವಾಗುವ ಸಾಧ್ಯತೆ ಇರುವುದಿಲ್ಲ.
ಬೆಳ್ಳುಳ್ಳಿಯನ್ನು ಆಹಾರದ ಮೂಲಕ ಪ್ರತಿ ದಿನ ಸೇವಿಸುತ್ತಿದ್ದಲ್ಲಿ ಆರೋಗ್ಯ ವೃದ್ಧಿಯಾಗಿ ಪ್ರಾಯ ಹೆಚ್ಚುವುದು. ವಾಸದ ಮನೆಯಲ್ಲಿ ಬೆಳ್ಳುಳ್ಳಿ ಹೊಟ್ಟಿನ ಹೊಗೆ ಹಾಕುವುದರಿಂದ ವಿಷಜಂತುಗಳು ಮನೆಯಿಂದ ಹೊರಬೀಳುತ್ತವೆ.
Comments