ಕಹಿಬೇವಿನ ಎಲೆ
3-4 ಕಹಿಬೇವಿನ ಎಲೆ ಸೇವನೆ ಮಾಡೋದ್ರಿಂದ ಎಷ್ಟೊಂದು ಲಾಭವಿದೆ ಗೋತ್ತಾ....?3-4 ಕಹಿಬೇವಿನ ಎಲೆ ಸೇವನೆ ಮಾಡೋದ್ರಿಂದ ಎಷ್ಟೊಂದು ಲಾಭವಿದೆ ಗೋತ್ತಾ ಉತ್ತಮ ಆರೋಗ್ಯವನ್ನು ರೂಪಿಸುವಲ್ಲಿ ಹಲವು ಮರಗಿಡಗಳು ಔಷಧಿಯ ಗುಣವನ್ನು ಹೊಂದಿರುತ್ತವೆ ಅವುಗಳಲ್ಲಿ ಈ ಕಹಿ ಬೇವು ಕೂಡ ಒಂದು ಇದರ ಮಹತ್ವ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ಕಹಿಬೇವಿನ ಎಲೆಯನ್ನು ಸೇವನೆ ಮಾಡೋದ್ರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ, ಹಾಗು ಚರ್ಮದಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕಿ, ತುರಿಕೆ, ಅಲರ್ಜಿಯಂತಹ ಚರ್ಮ ಸಂಬಂಧಿ ರೋಗಕ್ಕೂ ಕಹಿಬೇವಿನ ಎಲೆ ಸೇವನೆ ಮಾಡುವುದು ಸೂಕ್ತ.
ಕಹಿಬೇವಿನ ಎಲೆ ಸೇವನೆಯಿಂದ ಕೂದಲು ಉದರುವ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು, ಹಾಗು ಕೂದಲು ಸೊಂಪಾಗಿ ಬೆಳೆಯುತ್ತದೆ. ಮತ್ತೊಂದು ವಿಶೇಷವೆಂದರೆ ಕಣ್ಣಿನ ತುರಿಕೆ ಹಾಗು ಕೆಂಪಗಾಗುವುದು ಇತ್ಯಾದಿ ಸಮಸ್ಯೆಗಳಿಗೆ ಕಹಿಬೇವಿನ ಎಲೆ ಸೇವನೆ ಮಾಡುವುದು ಸೂಕ್ತ ಎನ್ನಲಾಗುತ್ತದೆ.
ಕಹಿಬೇವಿನ ಎಲೆಯನ್ನು ಸೇವನೆ ಮಾಡೋದ್ರಿಂದ ಕಹಿಬೇವಿನಲ್ಲಿ ಆಂಟಿಆಕ್ಸಿಡೆಂಟ್ ಅಲರ್ಜಿ ನಿವಾರಕ ಅಂಶ ಹೇರಳವಾಗಿದ್ದು, ದೇಹಕ್ಕೆ ಉತ್ತಮ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡಬಲ್ಲದು. ಅಷ್ಟೇ ಅಲ್ಲ, ಸಾಮಾನ್ಯ ಜ್ವರದಿಂದ ಕ್ಯಾನ್ಸರ್ ಹೃದಯ ಖಾಯಿಲೆಯಂತಹ ಗಂಭೀರ ರೋಗಗಳನ್ನೂ ತಡೆಗಟ್ಟುವ ಸಾಮರ್ಥ್ಯ ಕಹಿಬೇವಿನ ಎಲೆಗಿದೆ.
Comments