ಕಿವಿ ಹಣ್ಣು
ಹುಳಿ ಸಿಹಿ ಎರಡೂ ರುಚಿಯನ್ನು ಹೊಂದಿರುವ ಕಿವಿ ಹಣ್ಣು ದಿನಕ್ಕೊಂದು ಸೇವನೆ ಮಾಡಿದ್ರೆ ಏನ್ ಆಗುತ್ತೆ ಗೊತ್ತಾ ವಾವ್.....ಈ ಕಿವಿ ಹಣ್ಣಿನಲ್ಲಿ ಅಮೇರಿಕ ಕೃಷಿ ಇಲಾಖೆಯ ಪ್ರಕಾರ 100 ಗ್ರಾಂ ಕೀವಿ ಹಣ್ಣಿನಲ್ಲಿ 61 ಗ್ರಾಂ ಕ್ಯಾಲರಿ, 14.66 ಗ್ರಾಂ ಕಾರ್ಬೋಹೈಡ್ರೇಟ್. 1.14 ಗ್ರಾಂ ಪ್ರೊಟೀನ್, 0.52 ಗ್ರಾಂ ಫ್ಯಾಟ್ ಮತ್ತು 3 ಗ್ರಾಂ ಫ್ಯಾಟ್ ಅಂಶವನ್ನು ಹೊಂದಿದೆ ಹಾಗಾಗಿ ಈ ಹಣ್ಣನ್ನು ದಿನಕ್ಕೊಂದು ತಿಂದರೆ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.
ವಿಟಮಿನ್ ಸಿ ಸಿಗುತ್ತದೆ: ಕಿತ್ತಳೆ, ನಿಂಬೆಹಣ್ಣಿಗೆ ಹೋಲಿಸಿದರೆ ಕೀವಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದೆ. ಆದ್ದರಿಂದ ಈ ಹಣ್ಣು ಉತ್ತಮ ಆ್ಯಂಟಿ ಆಕ್ಸಿಡೆಂಟ್. ಹಾಗೆ ಇದು ಫ್ರೀ ರಾಡಿಕಲ್ಸ್ನ್ನು ತೆಗೆದುಹಾಕಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ: ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೀವಿ ಹಣ್ಣು ಉತ್ತಮ. ಇದರಲ್ಲಿರುವ ಡಯೆಟ್ರಿ ಫೈಬರ್ ಅಂಶ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಸಹಾಯ ಮಾಡುತ್ತದೆ.
ನಿದ್ದೆ ಸಮಸ್ಯೆಗೆ ಪರಿಹಾರ ನೀಡುತ್ತದೆ: ಕೀವಿ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಸೆರೊಟೊನಿನ್ ಅಂಶ ನಿದ್ದೆ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಮಲಗುವ ಮುನ್ನ ಒಂದು ಕೀವಿ ಹಣ್ಣನ್ನು ಸೇವಿಸುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.
ತ್ವಚೆಯ ಕಾಂತಿಗೂ ಉತ್ತಮ: ಕೀವಿ ಹಣ್ಣು, ಜಂಕ್ಫುಡ್ಸ್ ಸೇವನೆಯಿಂದ ಉಂಟಾಗುವ ಆ್ಯಸಿಡಿಕ್ ಅಂಶವನ್ನು ತೆಗೆದುಹಾಕಿ ದೇಹದಲ್ಲಿ ಪಿಹೆಚ್ ಮಟ್ಟವನ್ನು ನಿಯಂತ್ರಿಸುತ್ತದೆ. ಜೊತೆಗೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣವಿರುವುದರಿಂದ ತ್ವಚೆಯ ಏಜಿಂಗ್ನ್ನು ನಿಯಂತ್ರಿಸಿ, ಸುಕ್ಕುಗಟ್ಟುವುದು, ನೆರಿಗೆ, ಕಲೆಗಳನ್ನು ತಡೆಯುತ್ತದೆ.
Comments