ಗೋರಂಟಿ ಸೊಪ್ಪು
ಗೋರಂಟಿ ಸೊಪ್ಪು ಇಷ್ಟೊಂದು ರೋಗಗಳಿಗೆ ರಾಮಬಾಣ ಅಂದ್ರೆ ನಂಬುತ್ತೀರಾ..!ಹೌದು ಗೋರಂಟಿ ಸೊಪ್ಪು ಬರಿ ಕೈ ಗೆ ಮೆಹಂದಿ ಹಾಕಿಕೊಳ್ಳೋಕೆ ಮಾತ್ರ ಗೊತ್ತು ಆದರೆ ಈ ಗೋರಂಟಿ ಸೊಪ್ಪಿನಿಂದ ಹಲವಾರು ರೀತಿಯಲ್ಲಿ ಚರ್ಮ ರೋಗಗಳ ಗುಣಪಡಿಸುವ ಶಕ್ತಿ ಇದೆ.
ಅನೇಕ ಚರ್ಮ ರೋಗಗಳಿಗೆ ರಾಮಬಾಣ: ಹೌದು ಈ ಮೆಹಂದಿ ಸೊಪ್ಪಿನಲ್ಲಿ ಏನಿದೆ ಅಂತ ಅನಿಸಬಹುದು ಆದರೆ ಈ ಸೊಪ್ಪನ್ನೇ ನಮ್ಮ ಹಿರಿಯರು ಬಳಸುತ್ತಿದ್ದಾರೆ ಅಂದರೆ ಅದರಲ್ಲಿ ಒಂದು ಅರ್ಥ ಇದ್ದೆ ಇರುತ್ತದೆ. ಇದು ಅನೇಕ ಚರ್ಮ ರೋಗಗಳಿಗೆ ರಾಮಬಾಣವಾಗಿದೆ ತುರಿಕೆ ಆಗಲಿ ಬೆವರು ಸಲೆಯಾಗಲಿ ಬೆನ್ನಿನ ಮೇಲೆ ಏಳುವ ಸಣ್ಣ ಸಣ್ಣ ಗುಳ್ಳೆಗಳಿಗಾಗಲಿ ತಕ್ಷಣ ಈ ಸೊಪ್ಪನ್ನು ಅರೆದು ಹಚ್ಚಿದರೆ ಗುಣವಾಗುತ್ತದೆ.
ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ: ಗೋರಂಟಿ ಸೊಪ್ಪು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವುದರಲ್ಲಿ ಅತಿ ಹೆಚ್ಚು ಪರಿಣಾಮಕಾರಿಯಾಗಿದೆ. ಹೌದು ದೇಹದ ಉಷ್ಣಾಂಶ ಹೆಚ್ಚಿದೆ ಎನ್ನುವವರು ರಜೆ ದಿನಗಳಲ್ಲಿ ತಮ್ಮ ತಮ್ಮ ಅಂಗೈ ಹಾಗೂ ಅಂಗಾಲುಗಳಿಗೆ ಮೆಹಂದಿಯನ್ನು ಬಳಸುವುದರಿಂದ ದೇಹದ ಉಷ್ಣವನ್ನು ಕಡಿಮೆ ಮಾಡಿಕೊಳ್ಳಬಹುದು.
ಬಿಳಿ ಕೂದಲು ಹೋಗಿಸುವುದಕ್ಕೆ ನೈಸರ್ಗಿಕ ಮನೆಮದ್ದು: ನಾವು ಕೂದಲಿನ ಬಿಳಿ ಬಣ್ಣವನ್ನು ಮುಚ್ಚುವುದಕ್ಕಾಗಿ ಮೆಹಂದಿಯನ್ನು ಬಳಸುತ್ತೇವೆ. ಆದರೆ ಕೆಲವರು ರೆಡಿಮೇಡ್ ಕೆಮಿಕಲ್ ಮಿಶ್ರಿತವಾದದನ್ನು ಬಳಸುತ್ತಾರೆ. ಅದರ ಬದಲಾಗಿ ನೈಸರ್ಗಿಕ ವಾಗಿ ಸಿಗುವ ಈ ಸೊಪ್ಪನ್ನು ಬಳಸುವುದರಿಂದ ನಮ್ಮ ಕೂದಲಿನ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
Comments