ಸೋಡಾ
ನೀವು ಈ ಪಾನೀಯವನ್ನು ಕುಡಿಯದ್ರೆ ಇದ್ರೆ ನಿಮ್ಮ ಅರೋಗ್ಯ ತುಂಬ ಉತ್ತಮವಾಗಿರುತ್ತೆ ಆಗಿದ್ರೆ ಆ ಪಾನೀಯ ಯಾವುದು ಗೊತ್ತಾ...!ನಮ್ಮ ಅರೋಗ್ಯ ತುಂಬಾ ಉತ್ತಮವಾಗಿರಲಿ ಅಂತ ನಾವು ಹಲವು ರೀತಿಯ ಕಾಯಿಲೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಹಾಗಾಗಿ ನೀವು ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಅಂದ್ರೆ ಈ ಪಾನೀಯವನ್ನು ಕುಡಿಯ ಬೇಡಿ. ಯಾವ ಪಾನೀಯ ಮತ್ತು ಯಾಕೆ ಅನ್ನೋದು ಇಲ್ಲಿದೆ ನೋಡಿ.
ಸೋಡಾ ಮಿಶ್ರಿತ ಪಾನೀಯಗಳು ಮತ್ತು ಸೋಡಾವನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲೆ ಹಲವು ಅಡ್ಡ ಪರಿಣಾಮಗಳು ಬೀರುತ್ತವೆ ಮತ್ತು ಇದರಿಂದ ಯಾವರೀತಿಯಾದ ರೋಗಗಳು ಬರುತ್ತವೆ ಅನ್ನೋದು ಇಲ್ಲಿವೆ ನೋಡಿ.
ಕಿಡ್ನಿ ಮತ್ತು ಲೀವರ್ ಸಮಸ್ಯೆ ಖಂಡಿತ: ನಿತ್ಯ ಒಂದು ಕಾರ್ಬೋಹೈಡ್ರೇಟ್ ಅಂಶವಿರುವ ಪಾನಿಯ ಸೇವಿಸುವುದರಿಂದ ದೀರ್ಘಕಾಲದ ಕಿಡ್ನಿ ಸಮಸ್ಯೆ ಉಂಟಾಗುವುದರಲ್ಲಿ ಸಂಶಯವಿಲ್ಲ. ಇದರ ಜೊತೆಗೆ ಲೀವರ್ ಸಮಸ್ಯೆ ಕೂಡ ಆರಂಭವಾಘುತ್ತದೆ. ಒಬೆಸಿಟಿ, ಮೂಳೆಗಳ ನೋವು ಎಲ್ಲದಕ್ಕೂ ಸೋಡಾ ಕಾರಣವಾಗುತ್ತದೆ.
ಹಲ್ಲಿನ ಆರೋಗ್ಯ ಕೆಡುತ್ತದೆ: ಸೋಡಾದಲ್ಲಿ ಸಕ್ಕರೆ ಮತ್ತು ಆ್ಯಸಿಡಿಕ್ ಅಂಶಗಳು ಹೆಚ್ಚಾಗಿರುತ್ತವೆ. ಇದರಿಂದ ಹಲ್ಲಿನ ಆರೋಗ್ಯ ಬೇಗ ಕೆಟ್ಟು, ಹಲ್ಲು ಹಳದಿ ಆಗುವುದು, ಹುಳುಕಾಗುವ ಸಮಸ್ಯೆ ಆರಂಭವಾಗುತ್ತದೆ.
ಸೋಡಾ ಡಿಹೈಡ್ರೇಟ್ ಮಾಡುತ್ತದೆ: ಸೋಡಾ ಸೇವನೆಯಿಂದ ದೇಹ ಬೇಗ ಡಿಹೈಡ್ರೇಟ್ ಆಗುತ್ತದೆ. ಇದೇ ಕಾರಣಕ್ಕೆ ಸೋಡಾ ಸೇವಿಸಿದ ನಂತರವೂ ಗಂಟಲು ಒಣಗುತ್ತದೆ. ಈ ರೀತಿ ಡಿಹೈಡ್ರೇಟ್ ಆಗುವುದರಿಂದ ತ್ವಚೆಯೂ ಡಲ್ ಆಗುವುದರ ಜೊತೆಗೆ ದೇಹದಿಂದ ಕಲ್ಮಶ ಹೊರಹೋಗಲು ತೊಂದರೆ ಉಂಟಾಗಿ ಆರೋಗ್ಯ ಕೆಡುತ್ತದೆ.
ಡಯಾಬಿಟಿಸ್ ಮತ್ತು ಹೃದಯ ಸಂಬಂಧಿ ಸಮಸ್ಯೆಯ ಸಾಧ್ಯತೆ ಹೆಚ್ಚು: ನಿತ್ಯ ಸೋಡಾ ಸೇವಿಸುವುದರಿಂದ ಟೈಪ್2 ಡಯಾಬಿಟಿಸ್ ಆರಂಭವಾಗುವ ಸಂಭವ ಹೆಚ್ಚು. ಜೊತೆಗೆ ಅಧ್ಯಯನಗಳ ಪ್ರಕಾರ ಸೋಡಾ ಮೆಟಾಬೊಲಿಸಮ್ ಮೇಲೆ ಪರಿಣಾಮ ಬೀರುವುದರಿಂದ ಹೃದಯ ಸಂಬಂಧಿ ಸಮಸ್ಯೆ ಉಂಟಾಗುತ್ತದೆ.
Comments