ಪಪ್ಪಾಯ
ಮಾರ್ನಿಗ್ ಟೈಮ್ ಒನ್ ಪೀಸ್ ಪಪ್ಪಾಯ ಹಣ್ಣು ತಿನ್ನಿ ಆಮೇಲೆ ನೋಡಿ ಹೇಗಿರುತ್ತೆ ಅದರ ಆಟ ಅಂತ ನೀವೇ ಬೆರಗಾಗುತ್ತಿರ..!ಹೌದು ನೀವು ಬೆಳಗಿನ ಸಮಯದಲ್ಲಿ ಪಪ್ಪಾಯ ಹಣ್ಣು ತಿನ್ನುವುದರಿಂದ ಹಲವಾರು ರೀತಿಯವಾದ ಪ್ರಯೋಜನಗಳಿವೆ ಆ ಪ್ರಯೋಜನಗಳನ್ನು ನೀವು ತಿಳಿದುಕೊಂಡರೆ ಖಂಡಿತ ಬೆರಗಾಗುತ್ತಿರ ಯಾವೆಲ್ಲ ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ.
ಬೆಳಗಿನ ಸಮಯ ಪಪ್ಪಾಯಿಯಲ್ಲಿ ವಿಟಮಿನ್ ಹಾಗೂ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ನಿಮ್ಮ ದೇಹಕ್ಕೆ ಕಡಿಮೆಯಾಗಿರುವ ನೀರಿನ ಅಂಶವನ್ನು ಇದು ನೀಡುವುದಲ್ಲದೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.
ಪಪ್ಪಾಯಿಯಲ್ಲಿ ಕೊಬ್ಬಿನಂಶವಿರುವುದಿಲ್ಲ. ಇದು ಶಕ್ತಿಯ ಒಂದು ಮೂಲ. ಇದ್ರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಎಷ್ಟು ಪಪ್ಪಾಯಿ ಸೇವನೆ ಮಾಡಿದ್ರೂ ನಿಮ್ಮ ತೂಕ ಹೆಚ್ಚಾಗುವುದಿಲ್ಲ. ಜೀರ್ಣಶಕ್ತಿಗೂ ಇದು ಒಳ್ಳೆಯದು.
ಪಪ್ಪಾಯಿಯಲ್ಲಿ ಕ್ಯಾಲ್ಸಿಯಂ ಮೆಗ್ನೀಸಿಯಮ್ ಮತ್ತು ತಾಮ್ರ ಹೇರಳವಾಗಿರುತ್ತದೆ. ಸಂಧಿವಾತ ಸಮಸ್ಯೆಯಿದ್ದವರು ಪಪ್ಪಾಯ ಸೇವನೆ ಮಾಡುವುದು ಬಹಳ ಮುಖ್ಯ. ಹೃದಯ ಸಂಬಂಧಿ ಖಾಯಿಲೆಗಳನ್ನು ಇದು ದೂರ ಮಾಡುತ್ತದೆ.
ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಟಾ-ಕ್ಯಾರೋಟಿನ್ ಇದ್ದಲ್ಲಿ ಅಸ್ತಮಾ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಪಪ್ಪಾಯದಲ್ಲಿ ಬೀಟಾ-ಕ್ಯಾರೋಟಿನ್ ಅಂಶ ಹೆಚ್ಚಿರುತ್ತದೆ. ಇದು ಅಸ್ತಮಾವನ್ನು ನಿಯಂತ್ರಿಸುತ್ತದೆ.
Comments