Skip to main content

ಬೆಣ್ಣೆ ಹಣ್ಣು (AVOCADO)

ಬೆಣ್ಣೆ ಹಣ್ಣು

ಈ ಬೆಣ್ಣೆ ಹಣ್ಣಿನಲ್ಲಿರುವ ಆರೋಗ್ಯಕಾರಿ ಲಾಭಗಳನ್ನು ತಿಳ್ಕೊಂಡ್ರೆ ಇವತ್ತೇ ಹುಡ್ಕೊಂಡು ಹೋಗ್ತೀರಾ..!

ಬೆಣ್ಣೆ ಹಣ್ಣು ಬರಿ ಜ್ಯುಸ್ ಮಾಡಿ ಕುಡಿಯುವುದಕ್ಕೆ ಮಾತ್ರ ಅಲ್ಲ ಅದರಿಂದ ವಿವಿಧ ಆರೋಗ್ಯಕ್ಕೆ ಸಹಕಾರಿಯಾಗುವ ಅಂಶಗಳು ಅಡಗಿವೆ.

ಮುಖದ ಚರ್ಮ ಒಣಗಿದ್ದರೆ ಬೆಣ್ಣೆ ಹಣ್ಣಿಗೆ ಬಾದಾಮಿ ಎಣ್ಣೆ ಹಾಕಿ ಕಲಸಿ ಮುಖಕ್ಕೆ ಲೇಪಿಸಿದರೆ ಚರ್ಮ ಮೃದುವಾಗುತ್ತದೆ. ನಿಯಮಿತವಾಗಿ ಬೆಣ್ಣೆ ಹಣ್ಣನ್ನು ಸೇವಿಸಿದರೆ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ.ಬೆಣ್ಣೆ ಹಣ್ಣು ಮತ್ತು ಪಪ್ಪಾಯ ಹಣ್ಣಿನ ಜ್ಯೂಸ್‌ ಸೇವಿಸಿದರೆ ಅಸಿಡಿಟಿ ನಿವಾರಣೆಯಾಗುತ್ತದೆ.

ಬೆಣ್ಣೆ ಹಣ್ಣಿನ ಬೀಜವನ್ನು ಒಣಗಿಸಿ ಪುಡಿ ಮಾಡಿ,ಆ ಪುಡಿಗೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಭೇದಿ ನಿಲ್ಲುತ್ತದೆ.ತುಟಿ ಒಡೆದಿದ್ದರೆ ಬೆಣ್ಣೆ ಹಣ್ಣನ್ನು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕಲಸಿ ತುಟಿಗಳಿಗೆ ಹಚ್ಚಿ 20 ನಿಮಿಷ ಬಿಟ್ಟರೆ ತುಟಿ ಮೃದುವಾಗುತ್ತದೆ.ಬೆಣ್ಣೆ ಹಣ್ಣಿಗೆ ಗುಲಾಬಿ ಎಣ್ಣೆ ಬೆರೆಸಿ ಸೋರಿಯಾಸಿಸ್‌ ಇರುವ ಜಾಗಕ್ಕೆ ಹಚ್ಚಿದರೆ ಚರ್ಮ ಮೃದುವಾಗುತ್ತದೆ.

ಬೆಣ್ಣೆ ಹಣ್ಣಿನ ಪೇಸ್ಟ್‌ಗೆ ಜೇನುತುಪ್ಪ ಸೇರಿಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ಶಮನವಾಗುತ್ತವೆ. ಉಗುರು ತೆಳ್ಳಗಿದ್ದು ಪದೇ ಪದೇ ಮುರಿಯುತ್ತಿದ್ದರೆ ಪ್ರತಿ ದಿನ ಬೆಣ್ಣೆ ಹಣ್ಣಿನ ಎಣ್ಣೆಯನ್ನು ಉಗುರುಗಳಿಗೆ ಮಸಾಜ್‌ ಮಾಡಿದರೆ ಉಗುರು ಗಟ್ಟಿಯಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಗೆ ಬೆಣ್ಣೆ ಹಣ್ಣನ್ನು ಸೇವಿಸಿದರೆ ಗರ್ಭಿಣಿಯರ ವಾಂತಿ ನಿಲ್ಲುತ್ತದೆ.ಬೆಣ್ಣೆ ಹಣ್ಣಿನ ಎಲೆಗಳನ್ನು ರುಬ್ಬಿ ಹೇರ್‌ ಪ್ಯಾಕ್‌ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಕಪ್ಪಗಾಗುತ್ತದೆ.ಬೆಣ್ಣೆ ಹಣ್ಣಿಗೆ ನಿಂಬೆ ರಸ ಮತ್ತು ನೀರು ಸೇರಿಸಿ ಜ್ಯೂಸ್‌ ಮಾಡಿ ಕುಡಿದರೆ ದೇಹ ಶುದ್ಧಿಯಾಗುತ್ತದೆ.

Comments