ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಕಲ್ಲು ಸಕ್ಕರೆ ಸೇರಿಸಿ ಕುಡಿದ್ರೆ ಏನೆಲ್ಲಾ ಆಗುತ್ತೆ ಗೊತ್ತಾ..!ಅಡುಗೆ ಮನೆಯ ಅಥವಾ ಫ್ರಿಜ್ ನ ಯಾವುದಾದರೂ ಒಂದು ಮೂಲೆಯಲ್ಲಿ ಖಂಡಿತ ಈ ಸೊಪ್ಪು ಕಾಣಲು ಸಿಗುತ್ತದೆ, ಅಡುಗೆಗೆ ಮಾತ್ರ ಈ ಸೊಪ್ಪನ್ನು ನೀವು ಉಪಯೋಗ ಮಾಡುತ್ತಿದ್ದರೆ ಮೊದಲು ಈ ಮಾಹಿತಿ ಯನ್ನು ಸಂಪೂರ್ಣವಾಗಿ ಒಮ್ಮೆ ಓದಿ.
ಔಷಧೀಯ ಗುಣಗಳು : ಕೊತ್ತಂಬರಿ ಸೊಪ್ಪಿನ ರಸದಿಂದ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ ಹಾಗು ಊಟದ ನಂತರ ಕೊತ್ತಂಬರಿ ಎಲೆಗಳನ್ನೂ ಅಗಿದು ತಿಂದರೆ ಒಳ್ಳೆಯದು.
ಕೊತ್ತಂಬರಿ ಸೊಪ್ಪಿನಲ್ಲಿ ಕಬ್ಬಿಣಾಂಶದ ಸಾರ ಹೇರಳವಾಗಿದ್ದು ರಕ್ತಹೀನತೆಯಿಂದ ಬಳಲುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಚಮಚೆ ಕೊತ್ತಂಬರಿ ಸೊಪ್ಪಿನ ರಸವನ್ನು ಜೇನಿನೊಂದಿಗೆ ಬೆರೆಸಿ ಸೇವಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.
ಕೊತ್ತಂಬರಿ ಸೊಪ್ಪಿನ ರಸವನ್ನು ಮೂಗಿನಲ್ಲಿ ಹಿಂಡಿದರೆ ಉಷ್ಣದಿಂದ ಮೂಗಿನಿಂದ ರಕ್ತ ಸ್ರಾವವಾಗುವುದು ನಿಲ್ಲುತ್ತದೆ. ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ತಲೆಸುತ್ತಿಗೆ ಮುಕ್ತಿ ಹಾಕಿದಂತೆ.
ಹೊಟ್ಟೆಯುಬ್ಬರ ಹಾಗು ಜೀರ್ಣಕ್ರಿಯೆ ಸಮಸ್ಯೆಗೆ ಒಂದು ಲೋಟ ಮಜ್ಜಿಗೆಯನ್ನು ಕೊತ್ತಂಬರಿ ಸೊಪ್ಪಿನೊಂದಿಗೆ ಅಥವಾ ರಸದೊಂದಿಗೆ ಪ್ರತಿದಿನ ಊಟದ ನಂತರ ಕುಡಿಯುವದನ್ನು ರೂಢಿಸಿಕೊಳ್ಳಬೇಕು.
ಹಲ್ಲು ಹುಳುಕಾಗುದನ್ನು ತಡೆಯಲು, ಒಸಡು ಗಟ್ಟಿಗೊಳಿಸಲು ಪ್ರತಿದಿನ ಊಟದ ನಂತರ ಕೊತ್ತಂಬರಿ ಸೊಪ್ಪನ್ನು ತಿನ್ನಬೇಕು. ಅಡುಗೆಯಲ್ಲಿ ಹಲವಾರು ವಿಧಗಳಿಂದ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಕೊತ್ತಂಬರಿಯಲ್ಲಿಯ ತೈಲಾಂಶ ಪಿತ್ತನಾಶಕವೂ ಆಗಿದೆ.
Comments