ಕಪ್ಪು ಎಳ್ಳು
ಮೂಳೆ ಗಟ್ಟಿ ಮಾಡುವುದರ ಜೊತೆಗೆ ಈ ಹತ್ತು ರೋಗಗಳಿಗೆ ರಾಮಬಾಣ ಈ ಒಂದು ಹಿಡಿ ಕಪ್ಪು ಎಳ್ಳು ಹೇಗೆ ಬಳಸಬೇಕು ಗೊತ್ತಾ..!ಒಂದು ಹಿಡಿ ಕಪ್ಪು ಎಳ್ಳನ್ನು ಒಂದು ಲೋಟ ನೀರಲ್ಲಿ ಕುದಿಸಿ ಸೋಸಿಡಬೇಕು. ಈ ನೀರನ್ನು ದಿನಕ್ಕೆ 2ರಿಂದ 3 ಬಾರಿ ಸೇವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ.
ಕಫ ಕಟ್ಟಿ ಕೆಮ್ಮಿದ್ದರೆ ಎಳ್ಳೆಣ್ಣೆಗೆ ಸ್ವಲ್ಪ ಬೆಳ್ಳುಳ್ಳಿ ಜಜ್ಜಿ ಹಾಕಿ ಕುದಿಸಬೇಕು. ನಂತರ ಆ ಎಣ್ಣೆಯನ್ನು ಎದೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿದರೆ ಕಫ ಕರಗುತ್ತದೆ.
ಎಳ್ಳನ್ನು ನೀರಲ್ಲಿ ನೆನೆಸಿ ಪೇಸ್ಟ್ ಮಾಡಿ ಅದಕ್ಕೆ ಬೆಲ್ಲ ಬೆರೆಸಿ ಹಾಲಿನ ಜತೆ ಸೇವಿಸಿದರೆ ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಅನಿಮಿಯಾ ನಿವಾರಣೆಯಾಗುತ್ತದೆ.
ನಿದ್ದೆ ಬಾರದಿದ್ದರೆ ಸೋರೆಕಾಯಿ ರಸಕ್ಕೆ ಸಮಪ್ರಮಾಣದ ಎಳ್ಳಣ್ಣೆ ಸೇರಿಸಿ ತಲೆಗೆ ಮಸಾಜ್ ಮಾಡಿದರೆ ನಿದ್ದೆ ಚೆನ್ನಾಗಿ ಬರುತ್ತದೆ.
ಎಳ್ಳೆಣ್ಣೆಗೆ ಅರಿಶಿನ ಕಲಸಿ ಮುಖಕ್ಕೆ ಮಸಾಜ್ ಮಾಡಿದರೆ ಮೊಡವೆ ಕಲೆಗಳು ಶಮನವಾಗುತ್ತವೆ.
ಮುಟ್ಟು ಆಗುವ ಮುಂಚೆ ಸ್ವಲ್ಪ ಎಳ್ಳನ್ನು ಸೇವಿಸಿದರೆ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಶಮನವಾಗುತ್ತದೆ.
ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ರಾತ್ರಿ ನೆನೆಸಿದ ಎಳ್ಳನ್ನು ಸೇವಿಸಿದರೆ ಸಂಧಿ ಮತ್ತು ಮೂಳೆಗಳು ಆರೋಗ್ಯವಾಗಿರುತ್ತವೆ.
ಮುಖದ ಚರ್ಮ ಒರಟಾಗಿದ್ದರೆ ಪ್ರತಿ ದಿನ ಎಳ್ಳೆಣ್ಣೆ ಹಚ್ಚಿ ಮಾಡಿದರೆ ಚರ್ಮ ಮೃದುವಾಗುತ್ತದೆ.
ಲವಂಗವನ್ನು ಎಳ್ಳೆಣ್ಣೆಯಲ್ಲಿ ಹುರಿದು ನಂತರ ಲವಂಗವನ್ನು ಜಜ್ಜಿ ಪೇಸ್ಟ್ ಮಾಡಿ ಹಲ್ಲು ಮತ್ತು ವಸಡುಗಳಿಗೆ ಪ್ರತಿ ದಿನ ಹಚ್ಚಿ ಮಸಾಜ್ ಮಾಡಿದರೆ ಹಲ್ಲು ಮತ್ತು ವಸಡಿನ ಆರೋಗ್ಯ ಹೆಚ್ಚುತ್ತದೆ.
Comments