ದಾಸವಾಳ
ಸುಟ್ಟ ಗಾಯ,ಮೂತ್ರದ ಸೋಂಕು, ಅತಿ ರಕ್ತಸ್ರಾವನ್ನು ಈ ದಾಸವಾಳ ತಡೆಗಟ್ಟುತ್ತದೆ ಯಾವ ರೀತಿ ಬಳಸಬೇಕು ಅನ್ನೋದು ಇಲ್ಲಿದೆ..!ಹೌದು ದಾಸವಾಳ ಅನ್ನೋದು ಅನೇಕ ರೋಗಗಳಿಗೆ ರಾಮಬಾಣವಾಗಿದೆ ನಮ್ಮ ನಿಮ್ಮ ಮನೆಯ ಮುಂದೆ ಇರುವ ಈ ದಾಸವಾಳ ಯಾವೆಲ್ಲ ರೋಗಗಳಿಗೆ ಮನೆಮದ್ದು ಅನ್ನೋದು ಇಲ್ಲಿದೆ ನೋಡಿ.
ಹತ್ತು ದಾಸವಾಳದ ಹೂವುಗಳನ್ನು ಒಂದೂವರೆ ಲೀಟರ್ ನೀರಿನಲ್ಲಿ ರಾತ್ರಿ ನೆನೆಸಿ ಬೆಳಗ್ಗೆ ಅದರ ನೀರನ್ನು ಎರಡು ಚಮಚ ಸೇವಿಸಿ. ದಿನಕ್ಕೆ ಮೂರು ಬಾರಿ ಹೀಗೆ ಮಾಡಿದರೆ ಮೂತ್ರದ ಸೋಂಕು ನಿವಾರಣೆಯಾಗುತ್ತದೆ.
ಸುಟ್ಟ ಗಾಯಕ್ಕೆ ದಾಸವಾಳದ ಬೇರನ್ನು ನೀರಿನಲ್ಲಿ ಲೇಪ ಮಾಡಿ ಹಚ್ಚಿದರೆ ಗಾಯ ಬೇಗ ಮಾಯುತ್ತದೆ. ದಾಸವಾಳ ಹೂವಿನ ಐದು ಪಕಳೆಗಳನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಜೇನುತುಪ್ಪದ ಜೊತೆ ಸೇವಿಸಿದರೆ ಮುಖದ ಕಾಂತಿ ಹೆಚ್ಚುತ್ತದೆ.
ಕೂದಲು ದಟ್ಟವಾಗಿ ಬೆಳೆಯಲು ದಾಸವಾಳದ ಎಲೆ ಮತ್ತು ಹೂವುಗಳನ್ನು ನೀರಿನಲ್ಲಿ ರುಬ್ಬಿ ತಲೆಗೆ ಲೇಪ ಮಾಡಿ. ದಾಸವಾಳ ಹೂವಿನ ಕಷಾಯಕ್ಕೆ ಸ್ವಲ್ಪ ಹಾಲು, ಓಂಕಾಳು ಮತ್ತು ಬೆಲ್ಲ ಬೆರೆಸಿ ಸೇವಿಸಿದರೆ ಅಧಿಕ ಬಿಳಿಮುಟ್ಟು ಸಮಸ್ಯೆ ಗುಣವಾಗುತ್ತದೆ.
ದಾಸವಾಳದ ಎಲೆ ಮತ್ತು ಹೂವಿನ ಬೂದಿಯನ್ನು ನೀರಿನಲ್ಲಿ ಕಲಸಿ ಹುಬ್ಬುಗಳಿಗೆ ಲೇಪಿಸಿದರೆ ಹುಬ್ಬು ಕಪ್ಪಾಗುತ್ತದೆ. ತುಪ್ಪದಲ್ಲಿ ಕರಿದ ದಾಸವಾಳ ಹೂವನ್ನು ಸೇವಿಸಿದರೆ ಅತಿ ರಕ್ತಸ್ರಾವ ನಿಲ್ಲುತ್ತದೆ.
Comments