ಬೆಂಡೆಕಾಯಿ
ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದರೆ ಹೀಗೆ ಮಾಡಿ ಆದೊಷ್ಟು ಬೇಗ ನಿಮ್ಮ ರಕ್ತ ವೃದ್ಧಿಯಾಗುತ್ತದೆ..!
ಬೆಂಡೆಕಾಯಿಯಲ್ಲಿ ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್ ಸಿ ಮತ್ತು ಕೆ ಸಮೃದ್ಧವಾಗಿದೆ, ಈ ಸತ್ವಗಳು ರಕ್ತ ಕಣಗಳ ಉತ್ಪತ್ತಿಗೆ ಪ್ರಮುಖ ಕಾರಣವಾಗಿರುತ್ತದೆ ಇದರಿಂದ ಹಿಮೋಗ್ಲೊಬಿನ್ ಹೆಚ್ಚಿಸಲು ಸಹಾಯಕಾರಿ. ಆದುದರಿಂದ ಬೆಂಡೆಕಾಯಿ ರಕ್ತಹೀನತೆ ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ, ಇದಲ್ಲದೆ ಇನ್ನು ಹಲವು ಉಪಯೋಗಗಳಿಗೆ ಮುಂದೆ ಓದಿ.
ಮಧುಮೇಹವನ್ನು ತಡೆಯಬಲ್ಲುದು :
ಬೆಂಡೆಕಾಯಿಗೆ ರಕ್ತದಲ್ಲಿರುವ ಸಕ್ಕರೆಯ ಅಂಶದ ಮಟ್ಟವನ್ನು ಸಮತೋಲನದಲ್ಲಿರುವಂತೆ ಮಾಡಬಲ್ಲ ಗುಣಗಳಿವೆ, ಇನ್ಸುಲಿನ್ ನ ಉತ್ಪಾದನೆಯನ್ನು ದೇಹದಲ್ಲಿ ಹೆಚ್ಚಿಸುವುದರಿಂದ ಮಧುಮೇಹಿಗಳಲ್ಲಿ ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ.
ಗರ್ಭಧಾರಣೆಗೆ ಉಪಯುಕ್ತ :
ಬೆಂಡೆಕಾಯಿಯಲ್ಲಿ ಫೋಲೆಟ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಅಂಶ ಹೇರಳವಾಗಿದೆ, ಈ ಪೋಷಕಾಂಶಗಳು ಗರ್ಭಾವಸ್ಠೆಯಲ್ಲಿರುವ ತಾಯಿಯ ಆರೋಗ್ಯಕ್ಕೆ ಉತ್ತಮವಾದುದು, ಅಷ್ಟೇ ಅಲ್ಲದೆ ಭ್ರೂಣದ ಬೆಳವಣಿಗೆಗೆ ಕೂಡ ಇದು ಉತ್ತಮವಾದುದು.
ಅಸ್ತಮಾವನ್ನು ತಡೆಗಟ್ಟುತ್ತದೆ :
ಬೆಂಡೆ ಕಾಯಿಯಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿರುತ್ತದೆ, ಇದು ಉರಿಯೂತದ ಲಕ್ಷಣ, ಆಸ್ತಮಾ ಮತ್ತು ಇತರ ಕೆಲವು ಉಸಿರಾಟದ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಚರ್ಮವನ್ನು ಉತ್ತಮಗೊಳಿಸುತ್ತದೆ :
ಬೆಂಡೆಕಾಯಿಯಲ್ಲಿ ಉತ್ಕರ್ಷಣ (ಆಂಟೀ ಆಕ್ಸಿಡೆಂಟ್) ಮತ್ತು ವಿಟಮಿನ್ ಸಿ ಇರುವುದರಿಂದ ಈ ಎರಡು ಅಂಶಗಳು ಚರ್ಮದ ಕಾಂತಿಗೆ ಉತ್ತಮವಾದ ಪೋಷಕಾಂಶ ನೀಡುತ್ತದೆ, ಈ ತರಕಾರಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಚರ್ಮವು ಕಾಂತಿಯುತವಾಗಿ ಹೊಳೆಯಲು ಸಹಾಯಕಾರಿಯಾಗುತ್ತದೆ.
ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ :
ಬೆಂಡೆಕಾಯಿಯಲ್ಲಿ ಕೊಬ್ಬಿನ ಅಂಶವಿರುವುದಿಲ್ಲವಾದುದರಿಂದ ಇದರ ಸೇವನೆಯಿಂದ ದೇಹಕ್ಕೆ ಕೊಬ್ಬಿನ ಅಂಶ ಸೇರುವುದಿಲ್ಲ, ಅಲ್ಲದೆ ಈ ತರಕಾರಿಯು ಕೊಬ್ಬಿನ ಅಂಶವನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ ಮತ್ತು ಕೊಬ್ಬಿನಾಂಶ ಉತ್ಪತ್ತಿಗೆ ಕಾರಣವಾಗುವ ಕಣಗಳನ್ನು ತಡೆಯುವಲ್ಲಿ ಸಹಾಯಕಾರಿಯಾಗಿದೆ.
ತರಕಾರಿಯನ್ನು ಕಡೆಗಣಿಸುತ್ತಿರುವ ಯುವ ಜನನಾಂಗಕ್ಕೆ ಇದು ಓದಲೇ ಬೇಕಾದ ವಿಷಯ, ಈ ಮಾಹಿತಿ ನಿಮಗೆ ಉಪಯೋಗ ಅನಿಸಿದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Comments