ಅಗಸೆ ಸೊಪ್ಪು
ಈ ಸೊಪ್ಪುನ್ನ ತಿನ್ನುವುದರಿಂದ ಹಲ್ಲಿನ ವಸಡು ಕಬ್ಬಿಣದಂತೆ ಗಟ್ಟಿಯಾಗುತ್ತದೆ..!ಸೊಪ್ಪು ಮತ್ತು ತರಕಾರಿಗಳು ನಮ್ಮ ಆಹಾರದಲ್ಲಿ ಬಹಳ ಮುಖ್ಯವಾದವುಗಳು, ಅವುಗಳ ಬಳಕೆಯಿಂದ ನಮ್ಮ ದೇಹ ರಕ್ಷಣೆ ಮತ್ತು ಅರೋಗ್ಯ ವೃದ್ಧಿ ಸಾಧ್ಯ, ನಾವು ಸೇವಿಸುವ ಆಹಾರ ಪದಾರ್ಥಗಳಿಗೆ ಆಕರ್ಷಕ ಬಣ್ಣ, ಪರಿಮಳ ಹಾಗು ರುಚಿ ಸೊಪ್ಪು ಮತ್ತು ತರಕಾರಿಗಳಿಂದ ಲಭ್ಯ. ಹಸಿರು ಸೊಪ್ಪುಗಳ ಬಳಕೆಯಿಂದ ಜೀರ್ಣ ಶಕ್ತಿ ಹೆಚ್ಚುವುದು, ಶುಭ ಖರ್ಚಿನಲ್ಲಿ ಹೆಚ್ಚಿನ ಪ್ರಮಾಣದ ಪೋಷ್ಟಿಕಾಂಶಗಳು ದೊರಕುವವು ಹಾಗು ಕಣ್ಣುಗಳ ಅರೋಗ್ಯ ರಕ್ಷಣೆ ಆಗುವವು.
ಮೂಳೆಗಳ ಬೆಳವಣಿಗೆಗೆ ಹಲ್ಲುಗಳು, ವಸುಡುಗಳು ದೃಢವಾಗುವುದಕ್ಕೆ C ಜೀವಸತ್ವ ಅಗತ್ಯ, ಈ ಜೀವಸತ್ವವನ್ನು ನುಗ್ಗೆ ಸೊಪ್ಪಿನಿಂದ ಹೆಚ್ಚು ಪ್ರಮಾಣದಲ್ಲಿ ಪಡೆಯಬಹುದು, ಹೆಚ್ಚು ಬೆಲೆಯ ಪ್ರಾಣಿಜನ್ಯ ಆಹಾರ ವಸ್ತುಗಳಲ್ಲಿ ಲಭ್ಯವಿರುವ ರೈಬೋಪ್ಲೇವಿನ್ ಎಂಬ ಜೀವಸತ್ವವನ್ನು ಬಿಟ್ರೋಟ್ ಗೆಡ್ಡೆಯ ಮೇಲಿನ ಎಲೆಗಳೂ ಒದಗಿಸುತ್ತದೆ.
ಅಗಸೆ ಸೊಪ್ಪು ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿಲ್ಲ ಕಾರಣವೆಂದರೆ ಈ ಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಹೆಚ್ಚು ಪ್ರಯೋಜನ ಉಂಟು ಎಂಬ ವಿಷ್ಯ ಬಹು ಮಂದಿಗೆ ತಿಳಿಯದು, ಈ ಸೊಪ್ಪನ್ನು ಬೇಯಿಸಿ ತಿನ್ನುವುದರಿಂದ ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಮತ್ತು A ಜೀವಸತ್ವದ ಅಭಾವದಿಂದ ತಲೆದೋರುವ ರೋಗಗಳು ಗುಣವಾಗುವುದರಲ್ಲಿ ಸಂಶಯವಿಲ್ಲ.
ಹದಿನೈದಿ ದಿನಕೊಮ್ಮೆಯಾದರು ಅಗಸೆ ಸೊಪ್ಪು ಬಳಸುವುದು ಲೇಸು, ಕೆಲವರು ದ್ವದಶಿಯ ದಿನದಂದು ಈ ಸೊಪ್ಪನ್ನು ಖಡ್ಡಾಯವಾಗಿ ಬಳಸುತ್ತಾರೆ, ಈ ಸಂಪ್ರದಾಯಕ್ಕೆ ವೈಜಿನೈಕ ಹಿನ್ನಲೆ ಇಲ್ಲದೆ ಇಲ್ಲ.
ಅಗಸೆಯ ಹೂ, ಎಲೆ, ಕಾಯಿಗಳನ್ನು ಆಹಾರವಾಗಿ ಬಳಸುತ್ತಾರೆ. ಅಗಸೆಯ ಸೊಪ್ಪಿನಿಂದ ಬಯಲು ಸೀಮೆಯ ಗ್ರಾಮೀಣ ಮಹಿಳೆಯರು ಹುರುಳಿಕಾಳಿನ ಜತೆ ಬಸ್ಸಾರು ಮಾಡುತ್ತಾರೆ. ಹೂವುಗಳನ್ನ ಸಾರು ಪಲ್ಯ ಮಾಡುವುದರ ಜತೆಗೆ ಪಕೋಡ ಕೂಡ ಮಾಡುತ್ತಾರೆ. ಹೂವುಗಳು ಬೆಂದಾಗ ಅಣಬೆಯಂತೆ ಮೃದುವಾಗಿರುತ್ತವೆ. ಸೊಪ್ಪು ಮತ್ತು ಹೂವುಗಳಲ್ಲಿ ಅಧಿಕ ಪ್ರಮಾಣದ ಪ್ರೊಟೀನ್, ಎ ಜೀವಸತ್ವ, ಶರ್ಕರ ಪಿಷ್ಟ , ಸುಣ್ಣ ಮತ್ತು ಕಬ್ಬಿಣದ ಅಂಶಗಳಿರುತ್ತವೆ. ಪೋಷಕಾಂಶ ಗಳ ಕೊರತೆ ನಿವಾರಿಸಲು ತುಂಬಾ ಉಪಯುಕ್ತ ಮರ. ಮನೆಯ ಕೈತೋಟದಲ್ಲಿ ಒಂದೆರಡು ಮರಗಳನ್ನು ಬೆಳೆಸಿದರೆ ಪಕ್ಷಿ, ಜೆನ್ನೋಣಗಳಿಗೆ ಮಕರಂದ , ನಮಗೆ ಆಹಾರ ಕೊಡುವ ಬಹು ಉಪಯೋಗಿ ಮರ. ಮರದ ಗುಂಪು ಬೇರುಗಳು ಗಂಟುಗಳಿಂದ ಕೂಡಿದ್ದು ಅವುಗಳಲ್ಲಿರುವ ರೈಜೋಬಿಯಂ, ಬ್ಯಾಕ್ಟೀರಿಯಾಗಳು ವಾತವರಣ ದಲ್ಲಿರುವ ಸಾರಜನಕವನ್ನ ಆಪಾರ ಪ್ರಮಾಣದಲ್ಲಿ ಹೀರಿ ಮಣ್ಣಿನ ಸಾರವನ್ನು ವೃದ್ಧಿಸುತ್ತವೆ.
Comments