Skip to main content

ಬಾದಾಮಿ (ALMONDS)

ಬಾದಾಮಿ

ದಿನಾ 4 ಬಾದಾಮಿ ತಿಂದರೆ ನಿಮ್ಮ ದೇಹ ಹೀಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ...!

ಬಾದಾಮಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅತ್ಯುತ್ತಮವಾದ ಔಷಧಿಯಾಗಿದೆ. ಮೆದುಳು ಸಾಮರ್ಥ್ಯ ಹೆಚ್ಚಿಸಬೇಕೆಂದು ಬಯಸುವುದಾದರೆ ದಿನಾ ನಾಲ್ಕು ಬಾದಾಮಿ ಮಿಸ್‌ ಮಾಡದೆ ತಿನ್ನಿ.

ದಿನಾ ನಾಲ್ಕು ಬಾದಾಮಿ ನೀರಿನಲ್ಲಿ ನೆನೆಹಾಕಿ ತಿನ್ನುವುದರಿಂದ ಮೆದುಳಿನ ಸಾಮರ್ಥ್ಯ ಹೆಚ್ಚಾಗುವುದರ ಜತೆಗೆ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

ಮೆದುಳಿನ ಸಾಮರ್ಥ್ಯ ಹೆಚ್ಚುವುದು: ಬಾದಾಮಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಸೂಪರ್‌ಫುಡ್‌ ಆಗಿದೆ. ಬಾದಾಮಿಯಲ್ಲಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ

ತೂಕ ಇಳಿಕೆಗೆ ಸಹಕಾರಿ: ಕಡಿಮೆ ಕ್ಯಾಲೋರಿಯ ಬಾದಾಮಿ ಹಸಿವನ್ನು ಇಂಗಿಸುತ್ತದೆ. ಇದರಿಂದ ತೂಕ ಇಳಿಕೆಗೆ ಸಹಕಾರಿ.

ಹೃದಯಾಘಾತ ಅಪಾಯ ಕಡಿಮೆ ಮಾಡುತ್ತದೆ :ವಾರದಲ್ಲಿ 5 ಬಾರಿ ಬಾದಾಮಿ ತಿಂದರೆ ಹೃದಯಾಘಾತ ಆಗುವ ಬರುವ ಸಾಧ್ಯತೆ 50% ಕಡಿಮೆಯಾಗುತ್ತದೆ.

ಮೂಳೆಯನ್ನು ಬಲಪಡಿಸುತ್ತದೆ: ಬಾದಾಮಿಯಲ್ಲಿರುವ ರಂಜಕ ಹಾಗೂ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ :ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ, ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದು: ಗರ್ಭಿಣಿಯರು ಬಾದಾಮಿಯನ್ನು ತಮ್ಮ ಡಯಟ್‌ನಲ್ಲಿ ಸೇರಿಸುವುದರಿಂದ ಗರ್ಭದಲ್ಲಿರುವ ಮಗುವಿನ ಹಾಗೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಪ್ರಸವಪೂರ್ವ ತೊಂದರೆ ಉಂಟಾಗುವುದಿಲ್ಲ.

ನೆನಪಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಕಣ್ಣುಸುತ್ತ ಇರುವ ಕಪ್ಪು ಕಲೆ ಜೊತೆಗೆ ಹಲವು ರೋಗಗಳನ್ನು ಹೋಗಲಾಡಿಸುತ್ತೆ ಇದನ್ನು ಯಾವ ರೀತಿ ಬಳಸಬೇಕು ಗೊತ್ತಾ..!

ಒಂದು ಚಮಚ ಬಾದಾಮಿ ಎಣ್ಣೆಯನ್ನು ಅರ್ಧ ಚಮಚ ನಿಂಬೆರಸ ಮತ್ತು 10-15 ಹನಿಗಳ ಶುಂಠಿ ರಸವನ್ನು ಸೇರಿಸಿ ಸೇವಿಸಿದರೆ ದಮ್ಮು ಕಡಿಮೆಯಾಗುತ್ತದೆ.

ಗರ್ಭಿಣಿಯರು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ, ರಾತ್ರಿ ಹಾಲಿನಲ್ಲಿ ನೆನೆಸಿದ ಬಾದಾಮಿಯನ್ನು 1 ಚಿಟಿಕೆ ಕೇಸರಿ ಜತೆ ಸೇವಿಸಿದರೆ ಗರ್ಭಿಣಿಯ ಮತ್ತು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯ ವೃದ್ಧಿಸುತ್ತದೆ.ಬಾದಾಮಿಯ ಎಲೆಗಳನ್ನು ನೀರಿನಲ್ಲಿ ಅರೆದು ಚರ್ಮಕ್ಕೆ ಹಚ್ಚಿದರೆ ಒರಟು ಚರ್ಮ ಮೃದುವಾಗುತ್ತದೆ.

ಮಕ್ಕಳಿನ ನೆನೆಪಿನ ಶಕ್ತಿ ಮತ್ತು ಏಕಾಗ್ರತೆ ಶಕ್ತಿ ಹೆಚ್ಚಿಸಲು ರಾತ್ರಿ ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ಬೆಳಗ್ಗೆ ಅದರ ಸಿಪ್ಪೆ ತೆಗೆದು ಸೇವಿಸಬೇಕು.ಎಂಟರಿಂದ ಹತ್ತು ಹನಿ ಬಾದಾಮಿ ಎಣ್ಣೆಯನ್ನು ಒಂದು ಲೋಟ ಬೆಚ್ಚಗಿನ ಹಾಲಿನೊಡನೆ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗುತ್ತದೆ.

-ಸನ್‌ ಬರ್ನ್‌ ಆಗಿದ್ದಲ್ಲಿ ಅರ್ಧ ಚಮಚ ಬಾದಾಮಿ ಎಣ್ಣೆಗೆ ಒಂದು ಚಮಚ ನಿಂಬೆರಸ ಒಂದು ಚಮಚ ಹಾಲಿನ ಪುಡಿ ಮತ್ತು ಅರ್ಧ ಚಮಚ ಜೇನುತುಪ್ಪ ಸೇರಿಸಿ ಲೇಪಿಸಿದರೆ ಸನ್‌ ಬರ್ನ್‌ ಗುಣವಾಗುತ್ತದೆ.ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಪ್ರತಿ ದಿನ ಮಸಾಜ್‌ ಮಾಡಿದರೆ 2 ವಾರದಲ್ಲಿ ಕಣ್ಣುಸುತ್ತ ಇರುವ ಕಪ್ಪು ನಿವಾರಣೆಯಾಗುತ್ತದೆ.

ಈ ಮರೆಯುವು ಯಾರನ್ನು ಬಿಟ್ಟಿಲ್ಲ ಎಲ್ಲರರಿಗೂ ಕಾಡುತ್ತೆ ಆಗಾಗಿ ನಿಮಗೆ ಜೀವನದಲೇ ಈ ಮರೆಯುವು ಬರಬಾರದು ಆದ್ರೆ ಜಸ್ಟ್ ಹೀಗೆ ಮಾಡಿ..!

ಇತ್ತೀಚಿನ ದಿನಗಳಲ್ಲಿ ಮರೆವು ಅನ್ನುವುದು ಜಾಸ್ತಿಯಾಗಿದೆ, ಏನೇ ತಿಳಿದುಕೊಂಡುರು ಅದು ಜ್ಞಾಪಕ ಇರುವುದಿಲ್ಲ ಆದ್ದರಿಂದ ಅಂಥವರಿಗೆ ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲ್ಲು ಇಲ್ಲಿವೆ ನೋಡಿ ಸಿಂಪಲ್ ಸಲಹೆಗಳು:

ಬಾದಾಮಿ ತಿನ್ನುವುದರಿಂದ ಬಾದಾಮಿಯಲ್ಲಿರುವಂತಹ ಪ್ರೋಟೀನ್‌ಗಳು ನೆನಪಿನ ಶಕ್ತಿಯ ಸಾಮರ್ಥ್ಯ‌ವನ್ನು ವೃದ್ಧಿಸಲು ನೆರವಾಗುವುದು. ಪ್ರತಿ ದಿನ ಎರಡು ಮೂರು ಬಾದಾಮಿಗಳನ್ನು ನೆನೆಸಿಟ್ಟು ಸೇವಿಸಬೇಕು ಮತ್ತು ಒಣ ದ್ರಾಕ್ಷಿಯಲ್ಲಿ ಬೊರೊನ್‌ ಎನ್ನುವ ಅಂಶವಿದ್ದು ಇದನ್ನು ನಿಯಮಿತವಾಗಿ ತಿನ್ನುವುದರಿಂದ ಇದು ಸಹ ನಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ.

Comments

Popular posts from this blog

This blog explain about health tips which is very much useful for everyday healthy leaving.It describes how you can stay fit and fight with deceases. If you utilize these simple tips, you shall be the most healthy person in life time.