ರಾಗಿ ಮುದ್ದೆ
ಪ್ರತಿಯೊಬ್ಬರೂ ಹೇಳುತ್ತಾರೆ ರಾಗಿ ಮುದ್ದೆ ಆರೋಗ್ಯಕ್ಕೆ ತುಂಬ ಒಳ್ಳೇದು ಅಂತ ನಿಜವಾಗಲೂ ಇದರಿಂದ ಏನು ಲಾಭ ಗೊತ್ತಾ ನೀವು ತಿನ್ನುತ್ತಿರಾ..!ಹೌದು ಧಾನ್ಯಗಳಲ್ಲಿ ರಾಗಿ ಶ್ರೇಷ್ಟವಾದುದು ರಾಗಿ ಇಂದ ನಮ್ಮ ದೇಹಕ್ಕೆ ಆಗುವ ಲಾಭಗಳು ಅಪಾರ ನಮ್ಮ ದೇಹಕೆ ರಾಗಿ ತಂಪು ಮತ್ತು ಆರೋಗ್ಯವರ್ಧಕ ರಾಗಿ ಮುದ್ದೆಯಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆ ನೋಡಿ.
ದೇಹದ ಕೊಬ್ಬನ್ನು ಕಡಿಮೆಗೊಳಿಸಿ ತೂಕ ಇಳಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿರುವ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಇದರಲ್ಲಿರುವ ಅಮಿನೋ ಆಸಿಡ್ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.
ದೇಹಕ್ಕೆ ಅಗತ್ಯವಿರುವ ಐರನ್ ಒದಗಿಸುತ್ತದೆ. ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಅಧಿಕಗೊಳಿಸುತ್ತದೆ. ಮಲಬದ್ದತೆ ಸಮಸ್ಯೆಗೆ ಉಪಯೋಗಕಾರಿ.
ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಹೀಗೆ ಅನೇಕ ರೋಗಗಳಿಗೆ ರಾಮಬಾಣವಾಗಿದೆ ಈ ರಾಗಿ ಮುದ್ದೆ ಹಾಗಾಗಿ ಮೊದಲಿಂದಲ್ಲೂ ನಮ್ಮ ಹಿರಿಯರು ಹೇಳುವುದು ರಾಗಿ ಮುದ್ದೆ ತಿನ್ನಿ ಗಟ್ಟಿಯಾಗಿ ಇರಿ ಅಂತ.
Comments