Skip to main content

ಹಿಂಗು (HING)

ಹಿಂಗು (ಸಂಬಾರ ಪದಾರ್ಥ)

ದಿನ ನಿತ್ಯ ನೀವು ಕುಡಿಯುವ ನೀರಿನಲ್ಲಿ ಇದನ್ನು ಮಿಶ್ರಣ ಮಾಡಿ ಕುಡಿವುದರ ಜೊತೆಗೆ ಹೀಗೆ ಬಳಸಿದರೆ ನಿಮ್ಮಂತಹ ಅರೋಗ್ಯ ಮತ್ತೆ ಯಾರಿಗೂ ಸಿಗೋಕೆ ಚಾನ್ಸೇ ಇಲ್ಲ..!

ಇದು ಅತ್ಯಂತ ಪ್ರಾಚೀನವಾದ ಸಂಬಾರ ಪದಾರ್ಥ. ಇದನ್ನು ಭಾರತೀಯ ಉಪಖಂಡದಲ್ಲಿ ಹೇರಳವಾಗಿ ಬಳಸುತ್ತಾರೆ. ಇದನ್ನು ಆಹಾರದಲ್ಲಿ ಬಳಸಿದರೆ ಅದರ ರುಚಿ ಸೊಗಡು ಹೆಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತ ಮತ್ತು ನೇಪಾಳದಲ್ಲಿ ಇದನ್ನು ಔಷಧಿಯಾಗಿಯೂ ಬಳಕೆ ಮಾಡುತ್ತಾರೆ.

ಪ್ರಾಚೀನ ಕಾಲದಲ್ಲಿ ಹಿಂಗನ್ನು ನೀರಿನಲ್ಲಿ ಬೆರೆಸಿ ಕುಡಿಯುತ್ತಿದ್ದರು. ಇದನ್ನು ಮಹಿಳೆಯರು ಗರ್ಭನಿರೋಧಕವಾಗಿ ಹಾಗೂ ಇತರರು ಅಜೀರ್ಣ ಸಮಸ್ಯೆಗಳಿಗೆ ಬಳಸುತ್ತಿದ್ದರು. ಇನ್ನೂ ಕೆಲವರು ಇದನ್ನು ಎದೆ ಮತ್ತು ಮೂಗಿನ ಭಾಗದಲ್ಲಿ ಲೇಪಿಸಿಕೊಳ್ಳುತ್ತಿದ್ದರು. ಇದರ ಕಂಪು ದೇಹದಲ್ಲಿ ಪಸರಿಸಿ ನೆಗಡಿ ಮತ್ತು ಜ್ವರ ಕಡಿಮೆಯಾಗುತ್ತಿತ್ತು. ಅಸ್ತಮಾ ನಿವಾರಣೆಗೂ ಇದನ್ನು ಬಳಸುತ್ತಾರೆ.

ಆಯುರ್ವೇದದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಜೀರ್ಣ ಸಂಬಂಧಿ ಹಾಗು ವಾಯು ಸಂಬಂಧಿ ಸಮಸ್ಯೆಗಳಿಂದ ಉಪಶಮನ ಪಡೆಯಬಹುದು. ನೀರಿನಲ್ಲಿ ಹಿಂಗುವನ್ನು ಹಾಕಿ ಕುದಿಸಿ ಅದನ್ನು ಪೇಸ್ಟ್ ಪರಿಮಾಣಕ್ಕೆ ಕುಗ್ಗಿಸಿ ಉದರದ ಸುತ್ತ ಹಚ್ಚುವುದರಿಂದ ಹೊಟ್ಟೆ ಮತ್ತು ಜಠರದ ಸಮಸ್ಯೆಗಳೂ ನಿವಾರಣೆಯಾಗುತ್ತವೆ.

ಆಯುರ್ವೇದದ ಪ್ರಕಾರ, ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆಯಷ್ಟು ಹಿಂಗನ್ನು ಹಾಕಿ ನಿತ್ಯ ಸೇವಿಸುವುದರಿಂದ ಕೆಳಗಿನ 7 ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅವು ಏನು ಎಂದು ಈಗ ಒಂದೊಂದಾಗಿ ನೋಡೋಣ.

ಹಿಂಗು ಬೆರೆಸಿದ ನೀರು ಹೊಟ್ಟೆಯ ಉರಿಯನ್ನು ಕಡಿಮೆ ಮಾಡುವ (anti-inflammatory) ಗುಣಗಳನ್ನು ಹೊಂದಿದೆ. ಅಸಿಡಿಟಿ ಹಾಗೂ ಅಜೀರ್ಣ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ ಹಾಗೂ ಮಧುಮೇಹವನ್ನು ತಡೆಯಬಹುದು.

ಹಿಂಗನ್ನು ನೀರಿನಲ್ಲಿ ಕುದಿಸಿದಾಗ, ಅದರಲ್ಲಿನ ಮೂತ್ರವರ್ಧಕ ಗುಣಗಳು ಬಿಡುಗಡೆಯಾಗುತ್ತವೆ. ಇದು ಮೂತ್ರಕೋಶ ಹಾಗೂ ಕಿಡ್ನಿಯನ್ನು ಸ್ವಚ್ಛಗೊಳಿಸಿ ಮೂತ್ರ ಸಂಬಂಧಿ ಸೋಂಕುಗಳನ್ನು ನಿವಾರಿಸುತ್ತದೆ. ನಿತ್ಯ ಸೇವಿಸುವುದರಿಂದ ಮೂಳೆಗಳು ದೃಢವಾಗುತ್ತವೆ.

ಇದರಲ್ಲಿನ ಆಂಟಿಬ್ಯಾಕ್ಟೀರಿಯಲ್ ಗುಣಗಳು ಅಸ್ತಮಾ ಬಾರದಂತೆ ತಡೆಯುತ್ತವೆ.ಹಿಂಗಿನಲ್ಲಿ ಬೀಟಾ ಕೆರೋಟಿನ್ ಇರುತ್ತದೆ. ಇದರಿಂದ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ. ಕಣ್ಣುಗಳು ಆರೋಗ್ಯವಾಗಿ ಹಾಗೂ ತೇವಾಂಶದಿಂದ ಕೂಡಿರುತ್ತವೆ.

ಹಿಂಗಿನಲ್ಲಿನ ಆಂಟಿಆಕ್ಸಿಡೆಂಟ್‌ಗಳು ರಕ್ತಹೀನತೆಯನ್ನು ತಡೆಯುತ್ತವೆ. ನಮ್ಮ ಹಲ್ಲುಗಳು ದೃಢವಾಗಿರುತ್ತವೆ. ದೇಹದಲ್ಲಿನ ಕ್ಯಾನ್ಸರ್ ಕಾರಕ ಅಂಶಗಳನ್ನು ನಿವಾರಿಸಿ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ.

ಇಂಗು ಕೇವಲ ಅಡುಗೆಗೆ ಮಾತ್ರವಲ್ಲ ಇದ್ದರಿಂದ ಇಸಬು ಕಜ್ಜಿ ಹೀಗೆ ಹಲವು ರೋಗಗಳನ್ನು ಒಂದೇ ದಿನದಲ್ಲಿ ವಾಸಿ ಮಾಡಬಹುದು ಹೇಗೆ ಗೊತ್ತಾ...!

ಹೌದು ಇಂಗು ಅನ್ನೋದು ಕೇವಲ ಅಡುಗೆಗೆ ಮಾತ್ರ ಬಳಸದೆ ಹಲವು ರೋಗಗಳನ್ನು ಹೋಗಲಾಡಿಸಲು ಬಳಸಲಾಗುತ್ತದೆ ಯಾವ ರೀತಿಯಾಗಿ ಈ ಇಂಗು ಬಳಸಲಾಗುತ್ತದೆ ಮತ್ತು ಇದರಿಂದ ಯಾವೆಲ್ಲ ರೋಗವನ್ನು ಹೋಗಲಾಡಿಸಬಹುದು ಅನ್ನೋದು ಇಲ್ಲಿದೆ ನೋಡಿ.

ಇಸಬು, ಕಜ್ಜಿ, ಈ ಸಮಸ್ಯೆ ನಿವಾರಣೆಗೆ ಇಂಗಿನ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಹಚ್ಚುವುದರಿಂದ ಈ ಸಮಸ್ಯೆ ನಿವಾರಣೆಯಾಗುವುದು.

ಹೊಟ್ಟೆಹುಳು ಜಂತು ಹುಳು ಸಮಸ್ಯೆ ಇದ್ರೆ ಇಂಗು ಬಳಸಿ ನಿವಾರಣೆ ಪಡೆಯಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ. ಒಂದು ಚಮಚ ಇಂಗನ್ನು ಬೇವಿನ ರಸದೊಂದಿಗೆ ಸೇವಿಸಿದರೆ ಹೊಟ್ಟೆಹುಳು ಸಮಸ್ಯೆ ನಿವಾರಣೆಯಾಗುವುದು.

ವಾಯುದೋಷ ಅಂದ್ರೆ ಅಜೀರ್ಣತೆಯಿಂದ ಹೊಟ್ಟೆಯಲ್ಲಿ ವಾಯು ರೀತಿಯಲ್ಲಿ ಉತ್ಪತ್ತಿಯಾಗುತ್ತದೆ ಇದರಿಂದ ಅನಾರೋಗ್ಯಕ್ಕೆ ಎಡೆಮಾಡಿ ಕೊಡುತ್ತದೆ ಇದನ್ನು ನಿವಾರಿಸಿಕೊಳ್ಳಲ್ಲು ಒಂದು ಚಿಕ್ಕ ತುಂಡು ಹುರಿದ ಇಂಗು ಹಾಗು ಹಸಿ ಶುಂಠಿಯನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

Comments

Popular posts from this blog

This blog explain about health tips which is very much useful for everyday healthy leaving.It describes how you can stay fit and fight with deceases. If you utilize these simple tips, you shall be the most healthy person in life time.