ಮೆಂತೆ ಬೀಜ
ನೀವು ಏನೇ ಮಾಡಿದರು ನಿಮ್ಮ ದೇಹದ ತೂಕ ಕಡಿಮೆ ಆಗುತ್ತಿಲ್ಲವಾ, ಹಾಗಾದರೆ ನಿಮ್ಮ ಮನೆಯಲ್ಲಿ ಸಿಗುವ ಮೆಂತ್ಯ ಬಳಸಿ ಜಸ್ಟ್ ಹೀಗೆ ಮಾಡಿ..!ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಗಳನ್ನೂ ತಿನ್ನುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗುತ್ತಿದೆ. ಅದನ್ನು ಕಡಿಮೆ ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆ ಅದಕ್ಕೆ ಏನೇನೋ ಮಾಡುತ್ತೇವೆ ಆದರೆ ಪರಿಹಾರ ಸಿಗಲ್ಲ ಆದ್ದರಿಂದ ಜಸ್ಟ್ ಹೀಗೆ ಮಾಡಿ ಪರಿಹಾರ ಕಂಡುಕೊಳ್ಳಿ.
100 -150 ಗ್ರಾಂ ಮೆಂತೆ ತೆಗೆದುಕೊಂಡು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಿ ಅದನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಇದ್ರಿಂದ ಹಸಿವು ಬೇಗ ಆಗುವುದಿಲ್ಲ ಮತ್ತು ತೂಕ ಇಳಿಸಲು ತುಂಬಾ ಸಹಾಯವಾಗುತ್ತದೆ.
ದೇಹದ ತೂಕ ಇಳಿಸಿಕೊಳ್ಳಲು ಮೆಂತ್ಯ ತುಂಬಾ ಉಪಯೋಗಕಾರಿಯಾಗಿದೆ. ಈ ಮೆಂತ್ಯೆಯಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ.ಆದ್ದರಿಂದ ಇದು ತೂಕ ಇಳಿಸಿಕೊಳ್ಳಲು ಸಹಕಾರಿಯಾಗುವುದಲ್ಲದೆ ಮಲಬದ್ದತೆಯನ್ನು ನಿವಾರಿಸುತ್ತದೆ.
ಮೆಂತೆ ಬೀಜವನ್ನು ಸ್ವಲ್ಪ ಬಿಸಿ ಮಾಡಿ ಪುಡಿ ಮಾಡಿಟ್ಟುಕೊಳ್ಳಿ. ಇದನ್ನು ಬೆಳಿಗ್ಗೆ ಬಿಸಿ ಬಿಸಿ ನೀರಿಗೆ ಹಾಕಿ ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಒಂದು ಲೋಟ ಬಿಸಿ ನೀರಿಗೆ ಮೂರ್ನಾಲ್ಕು ಕಾಳು ಮೆಂತೆ ಹಾಕಿ. ಅದಕ್ಕೆ ದಾಲ್ಚಿನಿ ಹಾಗೂ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿದ ಟೀ ಸೇವನೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಒಂದು ಲೋಟ ಗ್ರೀನ್ ಟೀ ಗೆ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಮಿಕ್ಸ್ ಮಾಡಿ ಇದರ ಜೊತೆ ಮೆಂತೆ ಪುಡಿ ಹಾಕಿ. ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ.
ಮೆಂತೆ ಕಾಳು ಕೂಡ ಆರೋಗ್ಯಕಾರಿ. ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಮೆಂತ್ಯೆಗಿದೆ. ತೂಕ ಇಳಿಸುವುದು, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುವುದು ಹಾಗೂ ಮಧುಮೇಹವನ್ನು ಓಡಿಸುವ ಕೆಲಸವನ್ನು ಸಹ ಮಾಡುತ್ತದೆ ಮಾಡುತ್ತದೆ.
ಇಷ್ಟೇ ಅಲ್ಲದೆ ನಾವು ತಿನ್ನುವ ಆಹಾರದಲ್ಲಿ ಮೆಂತ್ಯೆ ಕಾಲು ಅಲ್ಲದೆ ಮೆಂತ್ಯೆ ಸೊಪ್ಪನ್ನು ಸಹ ಹೆಚ್ಚಾಗಿ ಬಳಸುವುದರಿಂದ ಸಹ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.
Comments