Skip to main content

ಒಣದ್ರಾಕ್ಷಿ (RAISIN)

ಒಣದ್ರಾಕ್ಷಿ

ನೀವು ಒಣದ್ರಾಕ್ಷಿ ತಿನ್ನುತ್ತಿರಾ ಹಾಗದ್ರೆ ಇದರ ಬಗ್ಗೆ ನಿಮಗೆಷ್ಟು ಗೊತ್ತಾ ಇದರ ಪರಿಣಾಮ..!

ಹೌದು ಒಣ ದ್ರಾಕ್ಷಿ ಮನುಷ್ಯನಿಗೆ ಸಾಕಷ್ಟು ರೀತಿಯಲ್ಲಿ ಪ್ರಯೋಜನವಾಗಿದೆ. ಒಣ ದ್ರಾಕ್ಷಿಯಲ್ಲಿ ಅಡಗಿದೆ ಸಮೃದ್ಧ ರೋಗ ನಿರೋಧಕ ಶಕ್ತಿ ಒಣ ದ್ರಾಕ್ಷಿಯಿಂದ ಆರೋಗ್ಯಕ್ಕೆ ಇಷ್ಟೊಂದು ಲಾಭನ. ಈ ಒಣ ದ್ರಾಕ್ಷಿಯಿಂದ ನಿಮಗಾಗು ಲಾಭಗಳು ಇಲ್ಲಿವೆ ನೋಡಿ.

ಒಣ ದ್ರಾಕ್ಷಿ ಮತ್ತು ಕಳು ಮೆಣಸನ್ನು ಸಮ ಪ್ರಮಾಣದಲ್ಲಿ ಅರೆದು ಸೇವಿಸಿದರೆ ಕೆಮ್ಮು ಕಫ ಕಡಿಮೆಯಾಗುತ್ತದೆ. ಕಬ್ಬಿಣದ ಸೌಟಿನಲ್ಲಿ ಉಪ್ಪನ್ನು ಹಾಕಿ ಬಿಸಿ ಮಾಡಿದಾಗ ಉಪ್ಪಿನ ಭಸ್ಮ ದೊರೆಯುತ್ತದೆ. ಅದನ್ನು ಎರಡು ಚಿಟಿಕೆಗಳಷ್ಟು ದ್ರಾಕ್ಷಿಯಲ್ಲಿಟ್ಟು ನುಂಗಬೇಕು. ಹೀಗೆ ನಿತ್ಯ ಬೆಳೆಗ್ಗೆ ಮಾಡಿದರೆ ಕೆಮ್ಮು ದಮ್ಮು ಕಡಿಮೆಯಾಗುತ್ತದೆ.

೧೦-೨೦ರಷ್ಟು ದ್ರಾಕ್ಷಿಗಳನ್ನು ಹಾಲಲ್ಲಿ ಅರೆದು ಜೇನಿನ ಜೊತೆ ಸೇವಿಸಿದರೆ ಮೂಗಿನ ರಕ್ತಸ್ರಾವ ನಿಯಂತ್ರಣಕ್ಕೆ ಬರುತ್ತದೆ.

ದ್ರಾಕ್ಷಿಯನ್ನು ಅರೆದು ಆ ನೀರನ್ನು ಕುದಿಸಿ ಸೇವಿಸಿದರೆ ಉಷ್ಣದಿಂದ ಉಂಟಾದ ಹೊಟ್ಟೆ ನೋವು ಶಮನ. ಒಣ ದ್ರಾಕ್ಷಿಯನ್ನು ೮-೧೦ ರಂತೆ ನಿತ್ಯವೂ ಬೆಳಗ್ಗೆ ಮತ್ತು ರಾತ್ರಿ ಸೇವಿಸಿದರೆ ಉಷ್ಣದಿಂದ ಉಂಟಾಗುವ ಕೆಮ್ಮು ಗುಣವಾಗುತ್ತದೆ.

ಒಣ ದ್ರಾಕ್ಷಿಯು ಮಿದುಳಿನ ಟಾನಿಕ್ ನಂತೆ ಕಾರ್ಯವೆಸಗುತ್ತದೆ. ಒಣ ದ್ರಾಕ್ಷಿಯನ್ನು ಹಾಲಿನ ಜತೆ ಸೇವಿಸಿದರೆ ಬಾಯಾರಿಕೆ ಶಮನವಾಗಿ ಶಕ್ತಿ ಬರುತ್ತದೆ.

೮-೧೨ ಒಣ ದ್ರಾಕ್ಷಿಯನ್ನು ರಾತ್ರಿ ನೆನಸಿತ್ತು ಮರುದಿನ ಬೆಳೆಗ್ಗೆ ಆಹಾರಕ್ಕೆ ಮುನ್ನ ಸೇವಿಸಿದರೆ ಮಲಬದ್ಧತೆ ದೂರ. ಸ್ತ್ರೀಯರು ನಿತ್ಯ ಆಹಾರದಲ್ಲಿ ಒಣ ದ್ರಾಕ್ಷಿಯನ್ನು ಬಳಸಿದರೆ ಗರ್ಭಧಾರಣೆಗೆ ಸಹಕಾರಿ.

ದ್ರಾಕ್ಷಿ ನೆಲ್ಲಿಚೆಟ್ಟು ಮತ್ತು ಕಲ್ಲು ಸಕ್ಕರೆಯನ್ನು ತಲಾ ಒಂಬತ್ತು ಗ್ರಂನಂತೆ ತೆಗೆದುಕೊಂಡು ಅರೆದು ಒಂದು ಲೋಟ ನೀರಿನಲ್ಲಿ ನೆನೆಸಿ. ಮರುದಿನ ಈ ಶೀತ ಕಷಾಯವನ್ನು ಸೇವಿಸಿದರೆ ಉರಿ ಮೂತ್ರ ಗುಣವಾಗುತ್ತದೆ.

ದ್ರಾಕ್ಷಿ ಎಲೆ, ಒಣ ದ್ರಾಕ್ಷಿ ಹಾಗು ಕರಬೂಜದ ಬೀಜಗಳಿಂದ ಕಷಾಯ ಮಾಡಿ ಸೇವಿಸಿದರೆ ಮೂತ್ರ ತಡೆ ಗುಣವಾಗುತ್ತದೆ. ಒಣ ದ್ರಾಕ್ಷಿಯನ್ನು ಹಾಲಲ್ಲಿ ಅರೆದು ಮುಖಕ್ಕೆ ಲೇಪಿಸಿದರೆ ಮುಖದ ಕಾಂತಿ ಹೆಚ್ಚಿಸುತ್ತದೆ.

Comments

Popular posts from this blog

This blog explain about health tips which is very much useful for everyday healthy leaving.It describes how you can stay fit and fight with deceases. If you utilize these simple tips, you shall be the most healthy person in life time.