Skip to main content

ಪೇರೀಕೊಂಡ ಪಾಚ (BLACK TEETH)

ಪೇರೀಕೊಂಡ ಪಾಚ

ಹಲ್ಲಿನ ಮೇಲೆ ಪೇರೀಕೊಂಡ ಪಾಚನ್ನು ಈ ಸಣ್ಣ ಸಲಹೆಯೊಂದಿಗೆ 5 ನಿಮಿಷಗಳಲ್ಲಿ ಹೋಗಲಾಡಿಸಬಹುದು..!

ನಕ್ಕಾಗ ಹಲ್ಲು ಮುತ್ತಿನಂತೆ ಹೊಳೆಯುತ್ತಿದ್ದರೆ ಆ ನಗು ನೋಡುಗರಿಗೆ ಮತ್ತಷ್ಟು ಆಕರ್ಷಕ ಅನಿಸುವುದು, ಈ ಮುಖಕ್ಕೆ ಅಂದ ಕೊಡುವುದು ಸುಂದರ ದಂತಪಕ್ತಿ ಹಲ್ಲುಗಳ ಆಕಾರ, ರಚನೆ, ಅದರ ಬಿಳುಪು ಹೊಳಪು ಮುಖದ ಸೌಂದರ್ಯಕ್ಕೆ ಬೋನಸ್ ಆದರೆ ಆಕಾರ, ರಚನೆ, ಎಲ್ಲ ಸರಿ ಇದ್ದು ಅದರ ಬಣ್ಣ ಮಾತ್ರ ಹಳದಿ ಇದ್ದರೆ ನಾವು ನಾಲ್ಕು ಜನರ ಮುಂದೆ ನಗಲು ಸಹ ಮುಜುಗರ, ಕಷ್ಟ ಪಡಬೇಕಾಗುತ್ತದೆ ಬಹಳಷ್ಟು ಜನರು ಹಲ್ಲುಗಳನ್ನು ಎಷ್ಟೇ ಉಜ್ಜಿದರೂ, ತಿಕ್ಕಿದರೂ ಅದು ಹಳದಿಯಾಗಿಯೇ ಗೋಚರಿಸುತ್ತದೆ, ನಮ್ಮ ದಂತಪಕ್ತಿಯನ್ನ ಶುಬ್ರವಾಗಿ, ಹೊಳಪುದಾಯಕವಾಗಿ ಇಟ್ಟುಕೊಳ್ಳಲು ಏನು ಮಾಡಬೇಕು ಅಂತೀರಾ ನೋಡಿ.

ಕೆಲ ಒಬ್ಬರು ತಮ್ಮ ಹಲ್ಲಿನ ಆರೋಗ್ಯಕ್ಕೋಸ್ಕರ ಕಾಲಾನುಕಾಲ ದಂತ ವೈದ್ಯರನ್ನು ಬೇಟಿ ಮಾಡುತ್ತಾರೆ ಹಾಗು ದಿನಕ್ಕೆ ಎರಡು ಸಾಲ ಹಲ್ಲು ಕೂಡ ಉಜ್ಜುತಾರೆ, ಅವರ ಹಲ್ಲು ಕೂಡ ಆರೋಗ್ಯಕರವಾಗಿ, ಹೊಳಪುದಾಯಕವಾಗಿರುತ್ತವೆ ಆದರೆ ಇನ್ನು ಕೆಲ ಒಬ್ಬರು ಅದೇನೆ ಮಾಡಿದರೂ ಅವರ ಹಲ್ಲು ಮಾತ್ರ ಅವರ ಮಾತನ್ನೇ ಕೇಳುವುದಿಲ್ಲ, ಹಳದಿ ಬಣ್ಣದಲ್ಲೇ ಇರುತ್ತದೆ. ಈ ಸರಳ ವಿಧಾನ ಅನುಸರಿಸಿದರೆ ಸಾಕು ಬರಿಯ 5 ನಿಮಿಷದಲ್ಲಿ ಬೆಳ್ಳಗೆ, ಪಳ ಪಳ ಹೊಳಿಯುವಂತೆ ಮಾಡಿಕೊಳ್ಳಬಹುದು.

ಮೊದಲನೇ ವಿಧಾನ : ನಿಮ್ಮ ಹಲ್ಲಿನ ಮೇಲೆ ಹಳದಿ ಬಣ್ಣ ಹೆಚ್ಚಾಗಿ ರೂಪುಗೊಂಡಿದ್ದಾರೆ, ಈ ಎರಡು ವಸ್ತುಗಳಿಂದ ಅದನ್ನು ನೀಗಿಸಬಹುದು, ಅವೇನೆಂದರೆ, ಬೇಕಿಂಗ್ ಸೋಡಾ ಹಾಗು ನಿಂಬೆ ಹಣ್ಣು, ಒಂದು ಚಿಕ್ಕ ಬಟ್ಟಲಿನಲ್ಲಿ ಬೇಕಿಂಗ್ ಸೋಡಾ ಒಂದು ಚಿಟಿಕೆಯಷ್ಟು ತೆಗೆದುಕೊಂಡು ಅದಕ್ಕೆ ಅರ್ದ ನಿಂಬೆ ಹಣ್ಣನ್ನು ಹಿಂಡಿ ಚನ್ನಾಗಿ ಬೆರೆಸಿಕೊಂಡು ಅದು ಪಾರದರ್ಶಕವಾಗಿ ಕಾಣುವ ಹಾಗೆ ಕರಗಿ ಬಿಡುತ್ತದೆ, ಆ ದ್ರವವನ್ನ ತೆಗೆದುಕೊಂಡು ನಿಮ್ಮ ಬೆರಳಿಂದ ಚನ್ನಾಗಿ ಉಜ್ಜಿಕೊಳ್ಳಿ, ಉಜ್ಜಿಕೊಂಡು 5 ನಿಮಿಷ ಆದನಂತರ ನೀರು ಹಾಕಿ ತೊಳೆದುಕೊಳ್ಳಿ ಹಾಗು ತಕ್ಷಣ ನೀರನ್ನ ಹೊರಗೆ ಹಾಕಿಬಿಡಿ. ಇದರಿಂದ ನಿಮ್ಮ ಹಲ್ಲುಗಳು ನಿಸ್ಸಂದೇಹವಾಗಿ ಹೊಳೆಯಲಾರಂಬೀಸುತ್ತದೆ.

ಎರಡನೇ ವಿಧಾನ : ತುಳಸಿಯನ್ನು ತೆಗೆದುಕೊಂಡು ಅದನ್ನು ಒಣಗಿಸಿ, ಪುಡಿಯಾಗಿಸಿ, ನಿಮ್ಮ ಬೆರಳಿನಿಂದ ತುಳಸಿ ಪೌಡರ್ ತೆಗೆದುಕೊಂಡು ಚನ್ನಾಗಿ ಬ್ರಷ್ ಮಾಡಿ ಹೀಗೆ ಮಾಡುವುದರಿಂದ ಸಹ ನಿಮ್ಮ ಹಳದಿ ದಂತಪಕ್ತಿ ಪಳ ಪಳ ಒಳೆಯುತ್ತವೆ, ಇನ್ನು ಈ ತುಳಸಿ ಪೌಡರ್ ನ್ನು ನೀವು ರೆಗ್ಯುಲರ್ ಆಗಿ ಉಪಯೋಗಿಸಿದರೆ ನಿಮ್ಮ ಹಲ್ಲು ಇನ್ನು ಹೊಳೆಯುತ್ತವೆ ನೀವು ಬಳಸುವ ಟೂತ್ ಪೇಸ್ಟ್ ಜೊತೆ ಕೂಡ ಇದನ್ನು ಬೆರಿಸಿ ಉಜ್ಜಬಹುದು.

ಸ್ವಲ್ಪ ಉಪ್ಪು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನ ಬೆರೆಸಿ ನಿಮ್ಮ ಹಳದಿಯುತ ಹಲ್ಲುಗಳ ಮೇಲೆ ಉಜ್ಜಿದರೂ ಸಹ ನಿಮ್ಮ ಹಲ್ಲು ಬೆಳ್ಳಗೆ ಶುಬ್ರವಾಗಿ ಕಾಣುತ್ತದೆ. ಒಂದು ಚಮಚ ತೆಂಗಿನೆಣ್ಣೆ ಬಾಯಿಗೆ ಹಾಕಿ 5 ನಿಮಿಷ ಬಾಯಿ ಮುಕ್ಕಳಿಸಬೇಕು ಈ ರೀತಿ ಮಾಡಿದರೆ ಹಲ್ಲು ಬೆಳ್ಳಗಾಗುವುದರ ಜತೆಗೆ ಬಾಯಿ ದುರ್ವಾಸನೆ ಇಲ್ಲವಾಗುವುದು. ಸ್ವಲ್ಪ ಆ್ಯಪಲ್ ಸಿಡರ್‌ ವಿನೆಗರ್ ಅನ್ನು ಬ್ರಷ್‌ಗೆ ಹಾಕಿ ಹಲ್ಲು ತಿಕ್ಕಿ ಈ ರೀತಿ ಮಾಡಿದರೆ ಹಲ್ಲು ಆಕರ್ಷಕವಾಗಿ ಕಾಣುವುದು.

Comments

Popular posts from this blog

This blog explain about health tips which is very much useful for everyday healthy leaving.It describes how you can stay fit and fight with deceases. If you utilize these simple tips, you shall be the most healthy person in life time.