ಸೀಬೆಕಾಯಿ
3 ದಿನ ಸತತವಾಗಿ ದಿನಕ್ಕೊಂದು ಸೀಬೆಕಾಯಿಯನ್ನ ತಿಂದರೆ ಏನಾಗುತ್ತೆ ಗೊತ್ತಾ..?ಸೀಬೆಕಾಯಿ ರುಚಿಯನ್ನ ಸವಿಯುತ್ತ ಅದರ ಜೊತೆಗೆ ಅರೋಗ್ಯ ಉಪಯೋಗವನ್ನು ತಿಳಿದು ಕೊಂಡರೆ ನೀವು ತಿನ್ನುವ ಸೀಬೆಕಾಯಿಗೆ ಹೆಚ್ಚು ಕಾರಣ ಸಿಕ್ಕಂತಾಗುತ್ತದೆ ಅಲ್ಲವೇ ಹಾಗಾದರೆ ಒಮ್ಮೆ ಮುಂದೆ ಓದಿ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಸೀಬೆ ಹಣ್ಣಿಗಿದೆ, ಕಿತ್ತಳೆಗಿಂತ ಹೆಚ್ಚು ವಿಟಾಮಿನ್ ಸಿ ಅಂಶವನ್ನು ಸೀಬೆ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿ, ಸಾಮಾನ್ಯ ಸೋಂಕು ಮುಂತಾದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ರಕ್ತದಲ್ಲಿ ಹೆಚ್ಚಿದ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಮಧುಮೇಹ ನಿಯಂತ್ರಣಕ್ಕೆ ಬರುವಂತೆ ಮಾಡುತ್ತದೆ, ಇದು ದೇಹದಲ್ಲಿನ ಕ್ಯಾನ್ಸರ್ ಕಣಗಳು ಮಾಯವಾಗುವಂತೆ ಮಾಡುತ್ತದೆ, ದೇಹದ ತೂಕ ಕಡಿಮೆ ಮಾಡುವಲ್ಲಿಯೂ ಇದರ ಕೊಡುಗೆ ಅಧಿಕ.
ಸೀಬೆ ಹಣ್ಣಿನಲ್ಲಿ ಲಿಕೊಪೇನ್, ಕ್ವೆರ್ಸೆಟಿನ್, ವಿಟಾಮಿನ್ ಸಿ ಮತ್ತು ಇತರ ಅಂಶಗಳು ಸೇರಿಕೊಂಡಿವೆ ಇದನ್ನು ಹೆಚ್ಚು ಹೆಚ್ಚು ಸೇವನೆ ಮಾಡುವುದರಿಂದ ಕ್ಯಾನ್ಸರ್ ಉಂಟುಮಾಡುವ ಸೆಲ್‌ಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.
ಇದರಲ್ಲಿ ಡಯಟರಿ ಫೈಬರ್ ಇರುವುದರಿಂದ ಒಂದು ಸೀಬೆಹಣ್ಣು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ, ಕಬ್ಬಿಣಾಂಶ ಮತ್ತು ವಿಟಾಮಿನ್ ಸಿ ಹೇರಳವಾಗಿರುವುದರಿಂದ ಸಾಮಾನ್ಯ ನೆಗಡಿ, ಕೆಮ್ಮಿನಂಥ ಸಮಸ್ಯೆಯನ್ನು ಗುಣಪಡಿಸುತ್ತದೆ.
ಸೀಬೆಕಾಯಿಯಲ್ಲಿ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ, ಸೀಬೆ ಹಣ್ಣನ್ನು ನಿಮ್ಮ ಡಯಟ್‌ನಲ್ಲಿರಿಸಿಕೊಂಡರೆ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯ, ಇದರಲ್ಲಿ ಕೊಬ್ಬಿನಂಶ ಕೇವಲ 0.9 ಇದ್ದು, 84 ಕ್ಯಾಲೊರಿ ಮಾತ್ರ ಇರುತ್ತದೆ.
ಸೀಬೆಕಾಯಿ ಸೇವನೆ ಚರ್ಮವನ್ನೂ ಹದವಾಗಿಡುತ್ತದೆ ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿಡುತ್ತದೆ ದಿನಕ್ಕೊಂದು ಸೀಬೆಕಾಯಿ ತಿಂದರೆ ಸಾಕು, ಅಗತ್ಯವಾದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಫೈಬರ್, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ ಮತ್ತು ಸಿ ಎಲ್ಲವನ್ನೂ ನೀಡುತ್ತದೆ.
Comments