ಕರ್ಬುಜ ಹಣ್ಣು
ರಾತ್ರಿ ನಿಮಗೆ ನಿದ್ರೆ ಬಾರದ ಸಮಸ್ಯೆ ಇದ್ದರೆ ಕರ್ಬುಜ ಹಣ್ಣನ್ನ ಬಳಸಿ ನಾವು ಹೇಳಿದ ಹಾಗೆ ಮಾಡಿ ಹಾಗೆ ಇದರ ಜೊತೆಗೆ ಹತ್ತು ರೋಗಗಳನ್ನು ಹೋಗಲಾಡಿಸುತ್ತೆ..!ಈ ಹಣ್ಣು ಎಷ್ಟೇ ಸಿಹಿ ಇದ್ದರು ಬೆಲ್ಲ ಅಥವಾ ಸಕ್ಕರೆ ಸೇರಿಸಿ ಹಾಗೆ ಸ್ವಲ್ಪ ಏಲಕ್ಕಿ ಪುಡಿ ಬೆರೆಸಿ ಜ್ಯೂಸ್ ಮಾಡಿ ಕುಡಿದರೆ ಆ ರುಚಿ ಅದ್ಬುತ, ರುಚಿ ಅಷ್ಟೇ ಅಲ್ಲದೆ ಅಧಿಕ ನೀರಿನ ಅಂಶ ಹೊಂದಿರುವ ಈ ಹಣ್ಣು ನಿಮ್ಮ ಆಯಾಸವನ್ನು ನಿವಾರಿಸುತ್ತದೆ, ಸುಸ್ತು ಹೋಗಲಾಡಿಸಿ ಹೊಸ ಚೈತನ್ಯ ನೀಡುತ್ತದೆ.
ಇನ್ನು ಆಟವಾಡಿ ದಣಿದು ಬಂದ ಮಕ್ಕಳಿಗೆ ಈ ಹಣ್ಣನ್ನು ಅಥವಾ ಹಣ್ಣಿನ ರಸವನ್ನು ಸವಿಯಲು ಕೊಟ್ಟರೆ, ಮಕ್ಕಳಿಗೂ ಖುಷಿ ಜೊತೆಯಲ್ಲಿ ಪೋಷಕರು ನಿರಾಳವಾಗಬುದು, ಮಕ್ಕಳಿಗೆ ನಾಲಿಗೆಗೆ ರುಚಿ ಹಿಡಿದು ದಾಹ ಅಥವಾ ದಣಿವನ್ನ ತಣಿಸಿ ಶಕ್ತಿ ನೀಡುತ್ತದೆ.
ತೂಕ ಹೆಚ್ಚಿನ ಸಮಸ್ಯೆಗೂ ಈ ಹಣ್ಣು ರಾಮಬಾಣ, ಜೀರ್ಣ ಕ್ರಿಯೆಯಲ್ಲಿ ಅದ್ಬುತ ಬದಲಾವಣೆಯನ್ನು ತರುತ್ತದೆ, ಅತಿ ಕಡಿಮೆ ಕೊಬ್ಬಿನಂಶ, ಒಳ್ಳೆಯ ಕಾರ್ಬೊಹೈಡ್ರೇಟ್ ಇದೆ, ಬೀಜದಲ್ಲಿ ಅಧಿಕ ಪೊಟ್ಯಾಷಿಯಂ ಇದ್ದು ತೂಕ ಕರಗಿಸಲು ಉಪಯುಕ್ತವಾಗಿದೆ.
ಕೆಮ್ಮು, ಜ್ವರ ಅಥವಾ ನಗಡಿಯಂತಹ ಕಾಯಿಲೆ ಬರಲು ಮುಖ್ಯ ಕಾರಣ ನಿಮ್ಮ ದೇಹದಲ್ಲಿ ರೋಗ ನಿರೋಧ ಶಕ್ತಿಯು ಕುಗ್ಗಿರುತ್ತದೆ ಆದರೆ ಇದಕ್ಕೂ ಕರ್ಬುಜ ಹಣ್ಣು ಪರಿಹಹಾರವನ್ನು ನೀಡುತ್ತದೆ, ಕರಬೂಜದಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇನ್ನು ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳ ಅವಶ್ಯಕತೆ ಹೆಚ್ಚಿದೆ ಕಾರಣ ಈ ಬಿಳಿ ರಕ್ತಕಣಗಳು ವೈರಸ್ ಹಾಗು ಬ್ಯಾಕ್ಟೀರಿಯಾ ವನ್ನು ನಾಶ ಮಾಡುವ ಕೆಲಸವನ್ನು ಮಾಡುತ್ತವೆ, ಈ ಹಣ್ಣಿನ ಸೇವನೆ ನಿಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಮುಖ್ಯವಾಗಿ ರಾತ್ರಿ ನಿದ್ರಾ ಸಮಸ್ಯೆ ಇದ್ದವರು ಈ ಹಣ್ಣನ್ನು ಸೇವಿಸುವುದರಿಂದ ಅಥವಾ ಮೇಲೆ ತಿಳಿಸಿದ ಹಾಗೆ ಸಕ್ಕರೆ ಅಥವಾ ಬೆಲ್ಲ ಮತ್ತು ಏಲಕ್ಕಿ ಬೆರೆಸಿ ಜ್ಯೂಸ್ ಮಾಡಿ ಕುಡಿದರೆ ಒಳ್ಳೆಯ ನಿದ್ರೆ ಬರುತ್ತದೆ, ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Comments