ಓಮಿನಿಕಾಳು
ಶೀತದಿಂದ ಗಂಟಲು ನೋವು ಹೆಚ್ಚಾಗಿದ್ದರೆ ಓಮಿನಿ ಕಾಳನ್ನ ಬಳಸಿ ಕ್ಷಣದಲ್ಲಿ ಗುಣ ಕಂಡುಬರುವುದು ಹಾಗು ಇನ್ನು ಈ ಹತ್ತು ರೋಗಗಳಿಗೆ ರಾಮಬಾಣ ಈ ಕಾಳು..!
ಬೆಲ್ಲದೊಂದಿಗೆ ಓಮಿನಿ ಕಾಲನ್ನ ತಿನ್ನುವ ಅಭ್ಯಾಸ ಮಾಡಿಕೊಂಡರೆ ಚರ್ಮ ರೋಗಗಳು ಬರುವ ಸಾಧ್ಯತೆ ಇರುವುದಿಲ್ಲಾ. ಊಟವಾದ ನಂತರ ಒಮಿನ ಕಾಲನ್ನು ಬೆಲ್ಲದ ಜೊತೆ ಸೇವಿಸಿದರೆ ಆಹಾರ ಚೆನ್ನಾಗಿ ಜೀರ್ಣಿಸುವುದು, ಹುಟ್ಟೇ ಹುಬ್ಬರ, ಅತಿಸಾರ ಮತ್ತು ಆಮಶಂಕೆ ನಿವಾರಣೆ ಯಾಗುವುದು.ಓಮಿನಿ ಕಷಾಯಾ ತಯಾರಿಸಿ ಅದಕ್ಕೆ ಉಪ್ಪು ಮಿಶ್ರ ಮಾಡಿ ಬಾಯಿ ಮುಕ್ಕಳಿಸುತ್ತಿದ್ದರೆ ಶೀತದಿಂದ ಉಂಟಾಗಿರುವ ಗಂಟಲು ನೋವು ಹಾಗು ಗಂಟಲ ಹುಣ್ಣು ವಾಸಿಯಾಗುವುದು.
ಕೊಬ್ಬರಿ ಎಣ್ಣೆಯಲ್ಲಿ ಒಮಿನ ಕಾಲನ್ನ ಬೇಯಿಸಿ ಮೂಗೇಟಿನಿಂದ ನೋಯುತ್ತಿರುವ ಭಾಗಕ್ಕೆ ತಿಕ್ಕುತ್ತಿದ್ದರೆ ನೋವು ನಿವಾರಣೆ ಯಾಗುವುದು. ಕಿವಿ ನೋವಿಗೆ ಇದೆ ಎಣ್ಣೆಯು ಒಂದೆರಡು ತೊಟ್ಟನು ಬಿಡುವುದರಿಂದ ಕಿವಿ ನೋವನ್ನು ಕಡಿಮೆ ಗೊಳಿಸುವುದು.ಹಾಗೆ ಹೊಟ್ಟೆಯಲ್ಲಿ ಹುಣ್ಣು ಬಂದರೆ ಏನು ಮಾಡ ಬೇಕು ಒಮ್ಮೆ ಮುಂದೆ ಓದಿ.
ಜಠರದಲ್ಲಿ ಆಮ್ಲೀಯತೆ ಹೆಚ್ಚು ಅದರ ಹೊರಮೈ ಮೇಲೆ ಹುಣ್ಣು ಆದಾಗ ಹೊಟ್ಟೆ ಹುಣ್ಣು ಆಗಿದೆ ಎಂದು ಗೊತ್ತಾಗುತ್ತದೆ ಜಠರದಲ್ಲಿ ಆಮ್ಲದ ಪ್ರಭಾವ ಕಡಿಮೆಯಾಗುವುದರಿಂದ ನೋವು ಅಷ್ಟಾಗಿ ಗೊತ್ತಾಗುವುದಿಲ್ಲ ಆದರೆ ಜಠರ ಖಾಲಿ ಇದ್ದಾಗ ನೋವಿನ ಅನುಭವ ಆಗುತ್ತದೆ.
ಹೊಟ್ಟೆ ಹುಣ್ಣಾಗಿದೆಯಂದು ಗೊತ್ತಾದ ನಂತರ ಶುಂಠಿ ಕಷಾಯವನ್ನು ಅಷ್ಟೇ ಪ್ರಮಾಣದ ಬಿಸಿ ಹಾಲಿನೊಂದಿಗೆ ಸೇರಿಸಿ ಅದಕ್ಕೆ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಗುಣ ಕಂಡುಬರುತ್ತದೆ ಹೊಟ್ಟೆ ಹುಣ್ಣಿನಿಂದ ನರಳುವ ರೋಗಗಳಿಗೆ ಹಾಲು ಸಿಹಿ ಹಣ್ಣುಗಳು ಕೋಸು ಮತ್ತು ಕ್ಯಾರೆಟ್ ರಸ ಇವುಗಳನ್ನು ಕೊಡಬೇಕು.
ಹೊಟ್ಟೆಯಲ್ಲಿ ಉರಿ ಕಂಡುಬಂದರೆ ಸೌತೆಕಾಯಿ ತುರಿದು ಹಿಂಡಿ ಆ ರಸವನ್ನು ಸೇವಿಸಬೇಕು.ರೋಗಿಯು ಹೆಚ್ಚಾದ ಬಾಯಾರಿಕೆಯಿಂದ ನರಳುತ್ತಿದ್ದರೆ ಬಿಸಿನೀರಿನಿಂದ ಹಾಗಾಗೇ ಬಾಯಿ ಮುಕ್ಕಳಿಸಬೇಕು. ಹೊಟ್ಟೆ ನೋವು ವಿಪರೀತವಾದರೆ ಬಿಸಿ ನೀರನ್ನು ತುಂಬಿದ ರಬ್ಬರ್ ಚೀಲವನ್ನು ಹೊಟ್ಟೆಯ ಮೇಲಿಟ್ಟು ಶಾಖ ಕೊಡಬೇಕು. ಮಲಬದ್ಧತೆ ಉಂಟಾಗಿದ್ದಲ್ಲಿ ಉಗುರು ಬೆಚ್ಚಗಿರುವ ನೀರಿನ ಎನಿಮಾ ತೆಗೆದುಕೊಳ್ಳಬೇಕು.
ಹೊಟ್ಟೆ ನೋವಿನಿಂದ ನರಳುವ ರೋಗಿಯು ರವೆ ಇಡ್ಲಿ, ಅಕ್ಕಿ ಇಡ್ಲಿ, ಹೆಸರುಬೇಳೆ, ಉದ್ದಿನಬೇಳೆ, ರಾಗಿ ,ಜೋಳ, ಎಲೆಕೋಸು, ಕ್ಯಾರೆಟ್, ಸೌತೆಕಾಯಿ, ಬಸಲೆಸೊಪ್ಪು, ಬೇಯಿಸಿ ನಂತರ ನುಣ್ಣಗೆ ಅರೆದು ಪರಂಗಿಹಣ್ಣು, ಬಾಳೆಹಣ್ಣು, ಕಿತ್ತಲೆಹಣ್ಣು, ಆವಿಯಲ್ಲಿ ಬೇಯಿಸಿ ಬೆಣ್ಣೆ ಹಾಕಿ ನುಣ್ಣಗೆ ಅರೆದು ಆಲೂಗೆಡ್ಡೆ ಅಥವಾ ಗೆಣಸು, ಹಾಲು, ಮಜ್ಜಿಗೆ ಇವುಗಳನ್ನು ಸೇವಿಸುವುದು ಒಳ್ಳೆಯದು.
ಕರಿದ ತಿಂಡಿ ಸಾಂಬಾರದ ಪದಾರ್ಥಗಳನ್ನು ಉಪ್ಪಿನಕಾಯಿ ಹಾಕಿ ಮಸಾಲೆ ಹಾಕಿ ಮಾಡಿದ ತಿನಿಸುಗಳು, ಸಂಡಿಗೆ ಗೊಜ್ಜು, ಚಟ್ನಿ, ಸಿಹಿ ತಿಂಡಿಗಳು, ತರಕಾರಿ, ಮಾಂಸ, ಈರುಳ್ಳಿ, ಹೊಗೆಸೊಪ್ಪು, ಕಾಫಿ, ಮಾದಕ ಪದಾರ್ಥಗಳು, ತಣ್ಣನೆಯ ಹಾಗೂ ಅತಿ ಬಿಸಿಯಾದ ಆಹಾರ ಸೇರಿಸುವುದರಿಂದ ರೋಗ ಹೆಚ್ಚಾಗುವುದರಿಂದ ಇವುಗಳನ್ನು ತ್ಯಜಿಸಬೇಕು.
Comments