Skip to main content

ಜೇನು ತುಪ್ಪ-HONEY

ಜೇನು ತುಪ್ಪ

ನೀವು ಜೇನು ತುಪ್ಪವನ್ನು ಈ ರೀತಿಯಾಗಿ ಬಳಕೆ ಮಾಡಿದ್ದೂ ನಿಜವೇ ಆದ್ರೆ ಈ ಎಲ್ಲ ಸರ್ವ ರೋಗಗಳಿಂದ ಮುಕ್ತಿ ಹೊಂದಬಹುದು..!

ಬಗೆಬಗೆಯ ವಿಟಮಿನ್ ನಿಂದ ಅನೇಕ ಬಗೆಯ ಪೋಷಕಾಂಶಗಳು ತುಂಬಿರುತ್ತವೆ ಜೇನಿನಲ್ಲಿ, ಜೇನು ಎಂಬುದು ಮನುಜನ ಶರೀರಕ್ಕೆ ಒಂದು ಆಸ್ತಿಕವಾದ ದಿವ್ಯ ಮೃತ, ಅನೇಕ ರೋಗಗಳಿಗೆ ಅದ್ಭುತವಾದ ದಿವ್ಯ ಔಷಧ.

ಕೆಮ್ಮು ಹೆಚ್ಚಾದಾಗ ತುಳಸಿ ಎಲೆಗೆ ಜೇನುತುಪ್ಪವನ್ನು ಮಿಶ್ರಮಾಡಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಸೇವಿಸಿದರೆ ಉತ್ತಮ ಪ್ರತಿ ಫಲವನ್ನು ಕೊಡುತ್ತದೆ, ಕ್ಷಯ ವ್ಯಾಧಿಗೂ ಸಹ ಇದು ದಿವ್ಯ ಔಷಧದಂತೆ, ಬಗೆಬಗೆಯ ಕಣ್ಣುಗಳ ರೋಗಕ್ಕೂ ಸಹ ಜೇನುತುಪ್ಪವು ಮಹತ್ತರವಾದ ಔಷಧಿ, ದೇಹದ ಮೇಲೆ ಆಗುವ ಸಣ್ಣಪುಟ್ಟ ಗಾಯಗಳಿಗೂ ಸಹ ಜೇನುತುಪ್ಪ ಹಚ್ಚುವುದರಿಂದ ಬಹಳ ಬೇಗ ಗುಣವನ್ನು ಕಾಣಬಹುದು ಸುಟ್ಟಗಾಯಕ್ಕೆ ಜೇನುತುಪ್ಪವನ್ನು ಹಚ್ಚುವುದರಿಂದ ಗಾಯವು ಬೇಗ ಗುಣವಾಗುವುದು ಮಾತ್ರವಲ್ಲದೆ ಗಾಯದ ಕಲೆಯೂ ಉಳಿಯುವುದಿಲ್ಲ.

ಪ್ರತಿ ನಿತ್ಯ ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ, ಜೇನು ಜಠರ ರಸದಲ್ಲಿರುವ ಆಮ್ಲತ್ವವನ್ನು ಕಡಿಮೆ ಮಾಡಿ ಸಕ್ರಮವಾಗಿರುವಂತೆ ಮಾಡುತ್ತದೆ, ನಮ್ಮ ಕರುಳುಗಳಲ್ಲಿ ಇರುವ ಬಗೆ ಬಗೆಯ ದೋಷಗಳು ನಿವಾರಣೆ ಮಾಡಿ ನಮ್ಮ ಅಜೀರ್ಣ ರೋಗವನ್ನು ಈ ಜೇನುತುಪ್ಪವು ಪರಿಹಾರ ಮಾಡುತ್ತದೆ, ರಕ್ತವನ್ನು ಶುದ್ದ ಮಾಡುವುದರಲ್ಲಿ ಜೇನುತುಪ್ಪ ಪ್ರಮುಖ ಪಾತ್ರವನ್ನು ವಹಿಸುತ್ತದೆ, ನಮ್ಮ ದೇಹದಲ್ಲಿನ ರಕ್ತವು ಕಲುಷಿತವಾಗಿದೆ ಪರಿಶುದ್ಧವಾಗಿ ಇದ್ದಲ್ಲಿ ನಮಗೆ ಯಾವುದೇ ರೋಗಗಳು ಆವರಿಸದೆ ಆರೋಗ್ಯವಾಗಿರಲು ಇದು ಸಹಾಯಕಾರಿ ಆಗುತ್ತದೆ.

ಬೆಳಗ್ಗೆ ಎದ್ದಾಕ್ಷಣ ಒಂದು ಗ್ಲಾಸ್ ಬಿಸಿ ನೀರಿಗೆ ಎರಡು ಚಮಚ ಜೇನುತುಪ್ಪ ಬೆರೆಸಿ ಪ್ರತಿ ನಿತ್ಯ ಸೇವಿಸುವುದರಿಂದ ಬೊಜ್ಜನ್ನು ನಿವಾರಣೆ ಮಾಡಿಕೊಳ್ಳಬಹುದು, ಜೇನುತುಪ್ಪವು ಜ್ವರ, ಕೆಮ್ಮು ಬಾರದಂತೆ ಮನುಜನ ಆರೋಗ್ಯವನ್ನು ರಕ್ಷಿಸುತ್ತದೆ, ಬಾಯಿ ಹುಣ್ಣಿಗೆ, ಹೊಟ್ಟೆ ಹುಣ್ಣಿಗೆ ಜೇನುತುಪ್ಪ ಸೇವನೆ ದಿವ್ಯ ಔಷಧಿ.

ಕೆಲಸ ಕಾರ್ಯಗಳನ್ನು ಮಾಡಿ ಆಯಾಸ ಹೆಚ್ಚಾಗಿರುವ ವ್ಯಕ್ತಿಗಳಿಗೆ ಮತ್ತು ಮಾನಸಿಕವಾಗಿ ಆಯಾಸ ಹೆಚ್ಚಾಗಿರುವ ವ್ಯಕ್ತಿಗಳಿಗೆ ಮತ್ತು ಬಗೆಯ ರೋಗಗಳಿಂದ ಬಾಪಡುತ್ತಿರುವ ವ್ಯಕ್ತಿಗಳಿಗೆ ಜೇನುತುಪ್ಪವು ದಿವ್ಯಔಷದ ಆಗುತ್ತದೆ, ಜೇನುತುಪ್ಪದಲ್ಲಿ ಗ್ಲೂಕೋಸ್ ಎಂಬ ಪದಾರ್ಥವು ಇರುವ ಕಾರಣದಿಂದ ರಕ್ತನಾಳಗಳು ಸ್ವಲ್ಪಮಟ್ಟಿಗೆ ವಿಕಸಿತ ವಾಗುತ್ತದೆ, ಈ ರೀತಿ ರಕ್ತನಾಳಗಳು ವಿಕಸಿತ ವಾಗುವುದರಿಂದ ರಕ್ತವು ಸರಳವಾಗಿ ಹರಿಯುತ್ತದೆ, ನಮ್ಮ ದೇಹದಲ್ಲಿ ರಕ್ತ ಸರಾಗವಾಗಿ ಹರಿಯುತ್ತಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಒಟ್ಟಾರೆ ದೇಹದ ಆರೋಗ್ಯ ವೃದ್ಧಿಗೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಅಭಿವೃದ್ಧಿಹೊಂದಲು ಪ್ರತಿನಿತ್ಯ ನಾವು ಒಂದು ಅಥವಾ ಎರಡು ಸ್ಪೂನ್ ಜೇನುತುಪ್ಪವನ್ನು ಸೇವಿಸುವುದು ಉತ್ತಮ, ನಮ್ಮ ಶರೀರದಲ್ಲಿ ಹೃದಯಕ್ಕೆ ಸಂಬಂಧಪಟ್ಟ ಮತ್ತು ರಕ್ತನಾಳಗಳಿಗೆ ಸಂಬಂಧಪಟ್ಟ ಲಿವರ್ ಗೆ ಸಂಬಂಧಪಟ್ಟ ರೋಗಗಳು ಬರದಂತೆ ನಮ್ಮ ದೇಹದ ಆರೋಗ್ಯವನ್ನು ರಕ್ಷಿಸುತ್ತದೆ ಜೇನುತುಪ್ಪ.

Comments

Popular posts from this blog

This blog explain about health tips which is very much useful for everyday healthy leaving.It describes how you can stay fit and fight with deceases. If you utilize these simple tips, you shall be the most healthy person in life time.